ಶಾಲೆಗೆ ಹೋಗದೆ ಕಲಿಯುವುದನ್ನೇ ಮರೆತ ಮಕ್ಕಳು.. !

ಶುಕ್ರವಾರ, 16 ಜುಲೈ 2021 (07:44 IST)
ಕೊರೊನಾ, ಲಾಕ್ಡೌನ್ನಿಂದ ಮಕ್ಕಳು ಶಾಲೆ ಕಡೆ ಮುಖ ಮಾಡಿ ವರ್ಷಗಳೇ ಕಳೆಯುತ್ತಿದೆ. ಎಷ್ಟೋ ಮಕ್ಕಳು ತಮ್ಮ ಹೆಸರನ್ನು ಬರೆಯುವುದನ್ನೂ ಮರೆತ್ತಿದ್ದಾರಂತೆ. ಮಕ್ಕಳು ಮೊದಲಿನ ಸ್ಥಿತಿಗೆ ಮರಳಲು 3 ವರ್ಷಗಳೇ ಬೇಕಾಗುತ್ತದೆ ಎನ್ನುತ್ತಿದೆ ಸಂಶೋಧನೆ.ಕೊರೊನಾ ಕಾರಣದಿಂದ ಉಂಟಾದ ಕಲಿಕೆಯ ನಷ್ಟವು  40 ರಿಂದ 60 ಶೇಕಡಾದ ಮಧ್ಯೆ ಇದೆ ಎಂದು ವಿದ್ಯಾರ್ಥಿಗಳು ಭಾವಿಸಿದರೆ, ಆ ನಷ್ಟ 30 ರಿಂದ 40 ಶೇಕಡಾ ಇದೆ ಎಂದು ವಿಶ್ವ ವಿದ್ಯಾನಿಲಯಗಳು ಹೇಳಿವೆ. ಕೊರೊನಾ ವಿಶ್ವದ ಜನರ ಪಾಲಿಗೆ ಹೊತ್ತು ತಂದ ಸಂಕಷ್ಟಗಳು ಹಲವು. ಅದರಿಂದ ಬಹಳಷ್ಟು ಮಂದಿ ಪ್ರಾಣ ಕಳೆದುಕೊಂಡರು, ಪ್ರಾಣ ಕಳೆದುಕೊಳ್ಳುತ್ತಲೇ ಇದ್ದಾರೆ. ಆದರೆ ಬದುಕಿದ್ದೂ ಭವಿಷ್ಯದ ಕನಸುಗಳಿಗೆ ಕೊಡಲಿ ಏಟು ಬೀಳಿಸಿಕೊಂಡು ನರಳುತ್ತಿರುವವರ ಸಂಖ್ಯೆಯೂ ಕಡಿಮೆ ಇಲ್ಲ.


 ಕೋವಿಡ್ ಸಾಂಕ್ರಮಿಕದ ದೆಸೆಯಿಂದ ದೊಡ್ಡವರ ಪರಿಸ್ಥಿತಿ ಒಂದು ರೀತಿಯದ್ದಾದರೆ, ಮುಂದಿನ ಭವಿಷ್ಯ ಕಟ್ಟಿಕೊಳ್ಳುವ ಕನಸು ಹೊತ್ತು ಓದುವ ವಿದ್ಯಾರ್ಥಿಗಳ ಪರಿಸ್ಥಿತಿ ಇನ್ನೊಂದು ತರಹ.

ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳ ಪ್ರಕಾರ ಕೊರೊನಾ, ಲಾಕ್ಡೌನ್ ಕಲಿಕೆಯ ನಷ್ಟಕ್ಕೆ ಕಾರಣವಾಗಿದೆ. 85 ಶೇಕಡಾ ವಿದ್ಯಾರ್ಥಿಗಳು ತಾವು ಕಲಿಕೆಯ ನಷ್ಟವನ್ನು ಎದುರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. “ ಎಡ್ಟೆಕ್ ಕಂಪೆನಿಯ ಟೀಮ್ಲೀಸ್ನ “ಉನ್ನತ ಶಿಕ್ಷಣದಲ್ಲಿ ಕೋವಿಡ್ -19 ಕಲಿಕೆಯ ನಷ್ಟ” ಎಂಬ ಇತ್ತೀಚಿನ ಅಧ್ಯಯನದ ಪ್ರಕಾರ, ಕಲಿಕೆಯ ನಷ್ಟದ ಪ್ರಮಾಣ ಅಧಿಕವಿದ್ದು, ಅದರ ಅಂತರವನ್ನು ಸರಿಪಡಿಸಲು ಮೂರು ವರ್ಷ ತಗಲಬಹುದು.
ಕೋವಿಡ್ ಕಾರಣದಿಂದ ಉಂಟಾದ ಕಲಿಕೆಯ ನಷ್ಟವು, 40 ರಿಂದ 60 ಶೇಕಡಾದ ಮಧ್ಯೆ ಇದೆ ಎಂದು ವಿದ್ಯಾರ್ಥಿಗಳು ಭಾವಿಸಿದರೆ, ಕೋವಿಡ್ ಕಾರಣದಿಂದ ಉಂಟಾದ ಕಲಿಕೆಯ ನಷ್ಟ 30 ರಿಂದ 40 ಶೇಕಡಾ ಇದೆ ಎಂದು ವಿಶ್ವ ವಿದ್ಯಾನಿಲಯಗಳು ಹೇಳಿವೆ. ಈ ಕಲಿಕೆ ನಷ್ಟಕ್ಕೆ ಕಾರಣ , ಡಿಜಿಟಲ್ ಸಾಧನಗಳು, ಸರಕಾರಿ ಸಂಸ್ಥೆಗಳಲ್ಲಿ ನಿಧಾನ ಆಡಳಿತ, ಮೊದಲೇ ಅಸ್ಥಿತ್ವದಲ್ಲಿ ಇದ್ದ ಸಾಮಥ್ರ್ಯದ ಕೊರತೆ, ಹೆಚ್ಚಿನ ದೇಶಗಳಿಗಿಂತ ದೀರ್ಘ ಲಾಕ್ಡೌನ್ಗಳು ಮತ್ತು ದುರ್ಬಲ ಆನ್ಲೈನ್ ಕಲಿಕೆಯ ವಿಷಯಗಳು.

ಕಲಿಕೆಯ ನಷ್ಟದ ಅಂದಾಜುಗಳನ್ನು ನಿರ್ಣಯಿಸಲು, ಟೀಮ್ಲೀಸ್ ದೇಶದಾದ್ಯಂತ 700ರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 75 ವಿಶ್ವ ವಿದ್ಯಾನಿಲಯದ ನಾಯಕರ ಸಂಶೋಧನ ಸಮೀಕ್ಷೆಯನ್ನು ನಡೆಸಿತು. “ಕೋವಿಡ್ -19 ಲಾಕ್ಡೌನ್ ನಮ್ಮ 1000ಕ್ಕೂ ಹೆಚ್ಚು ವಿಶ್ವ ವಿದ್ಯಾನಿಲಯಗಳು ಮತ್ತು 45,000ಕ್ಕೂ ಹೆಚ್ಚು ಕಾಲೇಜುಗಳನ್ನು ಒಳಗೊಂಡಿತ್ತು; ಇದರಿಂದ ಖಂಡಿತಾ ವೈರಸ್ ಹರಡದಂತೆ ತಡೆಯಲು ಸಾಧ್ಯವಾಯಿತು. ಆದರೆ ಕಾಲೇಜು ಮತ್ತು ವಿಶ್ವ ವಿದ್ಯಾನಿಲಯಗಳು, ತಮಗೆ ಪರಿಚಯವಿಲ್ಲದ ಮಾರ್ಗದಲ್ಲಿ ಕಾರ್ಯ ನಿರ್ವಹಿಸಲು, ಸಂಶೋಧನೆಯಂತಹ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಮತ್ತು ಆನ್ಲೈನ್ನಲ್ಲಿ ಕಾರ್ಯ ನಿರ್ವಹಿಸಲು ಕಾರಣವಾಯಿತು” ಎಂದು ಟೀಮ್ಲೀಸ್ ಎಡ್ಟೆಕ್ ತಿಳಿಸಿದೆ.

ಬಡವರು, ಹಳ್ಳಿಗಾಡಿನ ಪ್ರದೇಶಗಳು ಮತ್ತು ಹಿಂದುಳಿದ ಸಮುದಾಯಗಳ ನಡುವೆ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡಲು, ಡಿಜಿಟಲ್ ಇಂಡಿಯಾದ ವೇಗವನ್ನು ಹೆಚ್ಚಿಸಬೇಕು. ಉನ್ನತ ಶಿಕ್ಷಣ ಸಂಸ್ಥೆಗಳಿಗೆ, ಡಿಜಿಟಲ್ ಮೂಲ ಸೌಕರ್ಯ, ತರಬೇತಿ ಮತ್ತು ಪರಿವರ್ತನೆಗೆ ಏಕ ಅವಧಿಯ ಕೋವಿಡ್ ಚಾಲಿತ ಬಂಡವಾಳ ವೆಚ್ಚಕ್ಕಾಗಿ, ಸರ್ಕಾರಿ ನಿಧಿಗಳು ಮತ್ತು ಬ್ಯಾಂಕುಗಳಿಂದ ಆರ್ಥಿಕ ಬೆಂಬಲ ಸಿಗಬೇಕು ಎಂದು ಟೀಮ್ಲೀಸ್ ಎಡ್ಟೆಕ್ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ