ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಅನ್ವಯ ವೇತನ ಹೆಚ್ಚಳ ಮಾಡುವ ಕುರಿತು ವರದಿ ನೀಡಲು ಮುಂಬರುವ ಬಜೆಟ್ನಲ್ಲಿ ಒಂದು ಸಮತಿ ನೇಮಕ ಮಾಡಲಾಗುತ್ತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಕೊಟ್ಟರು.
ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ವೇತನ ಜಾರಿಗೆ ಕ್ರಮವಹಿಸಬೇಕು. ನಮ್ಮ ರಾಜ್ಯದ ಸರ್ಕಾರಿ ನೌಕರರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ವೇತನದಲ್ಲಿ ತಾರತಮ್ಯ ಇದೆ.
ಕೂಡಲೇ 7ನೇ ವೇತನ ಆಯೋಗ ಜಾರಿ ಮಾಡಬೇಕು ಎಂದು ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಒತ್ತಾಯ ಮಾಡಿದರು. 6 ನೇ ವೇತನ ಆಯೋಗ ವೇತನದಲ್ಲಿ ಇರೋ ತಾರತಮ್ಯ ಸರಿ ಮಾಡಿಬೇಕು. ರಾಜ್ಯದಲ್ಲಿ 2 ಲಕ್ಷ ಸರ್ಕಾರದಲ್ಲಿ ಹುದ್ದೆಗಳು ಖಾಲಿ ಇವೆ. ಕೂಡಲೇ ಇವುಗಳನ್ನು ಭರ್ತಿ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿದರು.
ಇದಕ್ಕೆ ಉತ್ತರ ನೀಡಿದ ಬೊಮ್ಮಾಯಿ ಅವರು, ರಾಜ್ಯ ಮತ್ತು ಕೇಂದ್ರ ನೌಕರರ ನಡುವೆ ವೇತನ ತಾರತಮ್ಯ ಇದೆ. ರಾಜ್ಯದಲ್ಲಿ 2017-18 ರಲ್ಲಿ ವೇತನ ಪರಿಷ್ಕರಣೆ ಆಗಿತ್ತು. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಈ ಬಗ್ಗೆ ಕ್ರಮ ತಗೋತೀವಿ ಎಂದು ಭರವಸೆ ನೀಡಿದರು.