ಇಂದಿನಿಂದ ಶಬರಿಮಲೆ ದೇಗುಲಕ್ಕೆ ಭಕ್ತರಿಗೆ ಪ್ರವೇಶಾವಕಾಶ

ಭಾನುವಾರ, 17 ಅಕ್ಟೋಬರ್ 2021 (15:22 IST)
ತಿರುವನಂತಪುರಂ : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಇಂದು ಮುಂಜಾನೆಯಿಂದ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ದೇವಸ್ಥಾನದ ಬಾಗಿಲು ನಿನ್ನೆಯೇ ತುಲಾ ಮಾಸದ ಪೂಜೆ ನಿಮಿತ್ತ ತೆರೆಯಲಾಗಿದೆ. ಆದರೆ ನಿನ್ನೆ ಸಂಜೆ ಭಕ್ತರಿಗೆ ಪ್ರವೇಶ ಇರಲಿಲ್ಲ.ಇಂದು ಬೆಳಗ್ಗೆಯಿಂದ ಭಕ್ತರೂ ದೇಗುಲಕ್ಕೆ ಪ್ರವೇಶ ಮಾಡಬಹುದಾಗಿದೆ.  ಇಂದು ಮುಂಜಾನೆ 5 ಗಂಟೆಯಿಂದಲೇ ದೇಗುಲದ ಬಾಗಿಲು ತೆರೆದಿದ್ದು, ಅಕ್ಟೋಬರ್ 21ರವರೆಗೂ ಭಕ್ತರಿಗೆ ಪ್ರವೇಶಾವಕಾಶ ಇದ್ದು, ಪೂಜೆ ಸಲ್ಲಿಸಬಹುದಾಗಿದೆ. 
ಇಂದಿನಿಂದ ಬಾಗಿಲು ತೆರೆದಿದ್ದರೂ ಭಕ್ತರು ಆನ್ಲೈನ್ ಮೂಲಕ ಬುಕ್ ಮಾಡಿಕೊಂಡೇ ಬರಬೇಕಾಗಿದೆ. https://www.onlinetdb.com/tdbweb/dist/ ಮೂಲಕ ಲಾಗಿನ್ ಆಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಹಾಗೇ ಬರುವವರು ಇತ್ತೀಚೆಗೆ ಆರ್​ಟಿ-ಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ಬಂದ ರಿಪೋರ್ಟ್ ಮತ್ತು ಕೊವಿಡ್ 19 ಲಸಿಕೆ ಎರಡೂ ಡೋಸ್ ಆಗಿರುವ ಸರ್ಟಿಫಿಕೇಟ್ ತರುವುದು ಕಡ್ಡಾಯ ದೇಗುಲ ಪ್ರವೇಶಕ್ಕೂ ಮೊದಲು ಇವೆರಡೂ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.  ಹಾಗೇ, ಕೊವಿಡ್ 19 ಕಾರಣದಿಂದ ದೇಗುಲದಲ್ಲಿ ಒಂದು ದಿನಕ್ಕೆ 15000 ಭಕ್ತರಿಗೆ ಮಾತ್ರ ಅವಕಾಶ ಇದೆ.  ಶಬರಿಮಲೆ ದೇಗುಲ ಅತ್ಯಂತ ಪ್ರಸಿದ್ಧ ಪಡೆದ ದೇವಾಲಯ. ಆದರೆ ಇದು ಉಳಿದ ದೇವಸ್ಥಾನಗಳಂತೆ ಪ್ರತಿದಿನ ಬಾಗಿಲು ತೆರೆಯುವುದಿಲ್ಲ. ತಿಂಗಳಲ್ಲಿ 5 ದಿನಗಳು ಮಾತ್ರ ಬಾಗಿಲು ತೆರೆಯಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ