ಬೆಂಗಳೂರು : ನುಗ್ಗೆಕಾಯಿ ತಿನ್ನಬೇಕೆಂಬ ಆಸೆ ಯಾರಿಗಿರುವುದಿಲ್ಲ ಹೇಳಿ, ಚಿಕ್ಕ ಮಗುವಿನಿಂದ ಹಿಡಿದು ವಯೋವೃದ್ಧರರೆಗೂ ನುಗ್ಗೆಕಾಯಿ ಎಂದ್ರೆ ಪಂಚಪ್ರಾಣ.
ಆದರೆ ಇದರ ಬೆಲೆ ಕೆಜಿಗೆ 300 ರೂ. ಜಿಗಿತ ಕಂಡಿರುವ ಪರಿಣಾಮ ನುಗ್ಗೆಕಾಯಿ ತಿನ್ನಬೇಕು ಎಂಬುವರ ಆಸೆಗೆ ತಣ್ಣೀರು ಎರಚಿದಂತಾಗಿದೆ.
ಭಾರಿ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದ್ದು, ನುಗ್ಗೆಕಾಯಿ ಖರೀದಿಸಲು ನೂರೆಂಟು ಬಾರಿ ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅನಿವಾರ್ಯವಾಗಿ ನುಗ್ಗೆಕಾಯಿ ಸೇವಿಸುವುದು ಬಿಡಬೇಕಾದಂತಹ ಪರಿಸ್ಥಿತಿ ಒದಗಿ ಬಂದಿದೆ. ಬಹುತೇಕರು ಮನೆಯಲ್ಲಿ ಬೇಳೆ ಸಾಂಬಾರು ಮಾಡಲು ನುಗ್ಗೆಕಾಯಿ ಬಳಕೆ ಮಾಡುತ್ತಾರೆ. ಇದಲ್ಲದೇ ವಿಶೇಷವಾಗಿ ನುಗ್ಗೆಕಾಯಿ ಫ್ರೈ ಕೂಡ ಮಾಡುತ್ತಾರೆ. ಆದರೆ ಎಲ್ಲದಕ್ಕೂ ಇದೀಗ ಬ್ರೇಕ್ ಬಿದ್ದಂತಾಗಿದೆ.ಬೆಲೆ ನೋಡಿದರೇ ಸಾಕು ಖರೀದಿ ಮಾಡಲು ಆಗುವುದಿಲ್ಲ. ಇದೊಂದು ಗಗನಕುಸುಮವಾಗಿದೆ. ಹೀಗಾಗಿ ಗ್ರಾಹಕರು ಅದರ ಸಹವಾಸವೇ ಬೇಡ ಎನ್ನುವಂತಾಗಿದೆ. ಇಷ್ಟೊಂದು ಬೆಲೆ ಏರಿಕೆ ಆಗಿರುವುದು ಖರೀದಿದಾರರಿಗೆ ಮಾತ್ರ ಸಾಕಷ್ಟು ಹೊರೆಯಾಗಿ ಪರಿಣಮಿಸಿದೆ. 300 ರೂ.ಬೆಲೆ ಜಿಗಿತ ನುಗ್ಗೆ ಪ್ರಿಯರಿಗೆ ಶಾಕ್ ನೀಡಿದೆ.