ಓಮಿಕ್ರಾನ್ ಬಗ್ಗೆ ಸಿಕ್ತು ಗುಡ್ ನ್ಯೂಸ್?

ಗುರುವಾರ, 23 ಡಿಸೆಂಬರ್ 2021 (15:35 IST)
ವಾಷಿಂಗ್ಟನ್ : ಜಗತ್ತಿನಲ್ಲಿ ಆತಂಕ ಮೂಡಿಸಿರುವ ಕೊರೊನಾ ವೈರಸ್ ರೂಪಾಂತರಿ ಹೊಸ ತಳಿ ಓಮಿಕ್ರಾನ್ ಬಗ್ಗೆ ಜನತೆಗೆ ಗುಡ್ ನ್ಯೂಸ್ವೊಂದು ಸಿಕ್ಕಿದೆ.

ಓಮಿಕ್ರಾನ್ ತೀವ್ರತೆ ಬಗ್ಗೆ ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದ ವಿವಿಧ ಅಧ್ಯಯನಗಳ ವರದಿಗಳನ್ನು ಬಹಿರಂಗಪಡಿಸಲಾಗಿದೆ. ಓಮಿಕ್ರಾನ್ ತೀವ್ರತೆ ಸೌಮ್ಯವಾಗಿರಲಿದೆ. ಡೆಲ್ಟಾ ಥಳಿಯಷ್ಟು ತೀವ್ರತೆ ಹೊಂದಿಲ್ಲ. ವಯಸ್ಸಾದ 100 ಮಂದಿಯಲ್ಲಿ ಮೂವರಿಗೆ ಈ ಸೋಂಕಿನ ತೀವ್ರತೆ ಕಾಡಬಹುದಷ್ಟೆ.

ಶೇ.70ರಿಂದ 80 ಜನರಿಗೆ ಸೋಂಕು ತಗುಲಿದರೂ ಆಸ್ಪತ್ರೆಗೆ ಸೇರುವವರ ಸಂಖ್ಯೆ ಮಾತ್ರ ಶೇ.47ರಷ್ಟು ಆಗಿರುತ್ತದೆ ಎಂಬ ವಿಚಾರ ಸ್ಕಾಟ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪ್ರಕಟಗೊಂಡ ಪ್ರಾಥಮಿಕ ವರದಿಯಲ್ಲಿ ಸಾಬೀತಾಗಿದೆ. 

ಡೆಲ್ಟಾಗೆ ಹೋಲಿಸಿದರೆ ಓಮಿಕ್ರಾನ್ನಿಂದ ಆಸ್ಪತ್ರೆಗೆ ಸೇರುವವರ ಸಂಖ್ಯೆ ಮೂರನೇ ಎರಡರಷ್ಟು ಭಾಗ ಕಡಿಮೆಯಾಗಲಿದೆ. ಅಷ್ಟೇ ಅಲ್ಲ ಬೂಸ್ಟರ್ ಡೋಸ್ ಲಸಿಕೆಯು ಸೋಂಕಿನ ವಿರುದ್ಧ ಹೋರಾಡುವಲ್ಲಿ ಗಣನೀಯ ಪಾತ್ರ ನಿರ್ವಹಿಸಲಿದೆ ಎಂದು ಸಹ ಅಧ್ಯಯನ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ