ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಭಾನುವಾರವಷ್ಟೇ ಚಾಲನೆ ದೊರಕಿದೆ. ಈ ಮಧ್ಯೆ ಕೆಲ ಮಹಿಳೆಯರು ದಾಖಲೆ ತರದೇ ಪರದಾಡಿದ ಪ್ರಸಂಗ ಇಂದು ನಡೆದಿದೆ.
ಸರ್ಕಾರ ಮತ್ತೆ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಸಾರಿಗೆ ಬಸ್ನಲ್ಲಿ ಉಚಿತ ಪ್ರಯಾಣ ಮಾಡುವಾಗ ಮೂಲ ದಾಖಲೆಯನ್ನೇ ಕೈಯಲ್ಲಿ ಹಿಡಿದು ಓಡಾಡಬೇಕಾಗಿಲ್ಲ. ಡಿಜಿಲಾಕರ್, ಝೆರಾಕ್ಸ್, ಪ್ರತಿಯನ್ನು ತೋರಿಸಬಹುದು ಎಂಬ ಮಾಹಿತಿ ಲಭ್ಯವಾಗಿದೆ.
ಮೂಲ ದಾಖಲೆಯ ಮಾರ್ಗಸೂಚಿಗೆ ಮಾರ್ಪಾಡು ಮಾಡಿ ನಕಲು ಪ್ರತಿ ಹಾಗೂ ಮೊಬೈಲ್ನಲ್ಲಿ ಡಿಜಿಲಾಕರ್ ಹಾರ್ಡ್ ಅಥವಾ ಸಾಪ್ಟ್ ಕಾಫಿ ತೋರಿಸಿಯೂ ಬಸ್ನಲ್ಲಿ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.