ಪ್ರವಾಸಿಗರಿಗೆ ಗುಡ್‍ನ್ಯೂಸ್!

ಮಂಗಳವಾರ, 30 ನವೆಂಬರ್ 2021 (12:12 IST)
ಚಿಕ್ಕಬಳ್ಳಾಪುರ : ಶನಿವಾರ, ಭಾನುವಾರ ಬಿಟ್ಟು ಉಳಿದ ದಿನಗಳಲ್ಲಿ ಪ್ರವಾಸಿಗರಿಗೆ ನಂದಿಬೆಟ್ಟಕ್ಕೆ ತೆರಳಲು ಜಿಲ್ಲಾಡಳಿತ ಅನುಮತಿ ನೀಡಿದೆ.
ಆಗಸ್ಟ್ 24 ರಂದು ರಾತ್ರಿ ಭಾರೀ ಮಳೆಯಾದ ಕಾರಣ ನಂದಿಬೆಟ್ಟದ ಪಕ್ಕದ ಬ್ರಹ್ಮಗಿರಿ ಬೆಟ್ಟದಿಂದ ಭೂಕುಸಿತವಾಗಿತ್ತು. ಪರಿಣಾಮ ನಂದಿಬೆಟ್ಟದ ರಸ್ತೆ ಕೊಚ್ಚಿ ಹೋಗಿತ್ತು. ಇದರಿಂದ ವಾಹನಗಳ ಸಂಚಾರ ಸಂಪೂರ್ಣ ಕಡಿತಗೊಂಡಿತ್ತು.
ಈಗ 80 ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಕೊಚ್ಚಿ ಹೋದ ರಸ್ತೆ ದುರಸ್ಥಿ ಕಾರ್ಯ ಪೂರ್ಣಗೊಳಿಸಿದೆ. ಹೀಗಾಗಿ ನಂದಿಬೆಟ್ಟಕ್ಕೆ ನಾಳೆಯಿಂದ ಪ್ರವಾಸಿಗರ ವಾಹನಗಳ ಪ್ರವೇಶಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅವಕಾಶ ನೀಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ