ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ಸಾಧ್ಯತೆ; ಸಿಎಂ

ಸೋಮವಾರ, 29 ನವೆಂಬರ್ 2021 (10:11 IST)
ಬೆಂಗಳೂರು : ಕೋವಿಡ್ ವೈರಸ್ನ ಹೊಸ ರೂಪಾಂತರ ತಳಿ ‘ಒಮಿಕ್ರಾನ್’ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ, ಹಾಂಕಾಂಗ್ ಹಾಗೂ ಬೋಟ್ಸ್ವಾನಾ ದೇಶಗಳಿಂದ ವಿಮಾನಯಾನ ನಿರ್ಬಂಧಿಸುವಂತೆ ಕೇಂದ್ರ ಸರಕಾರವನ್ನು ಕೋರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅಲ್ಲದೇ, ಕಟ್ಟೆಚ್ಚರದ ಕ್ರಮಗಳನ್ನು ಜಾರಿಗೊಳಿಸುವುದಾಗಿಯೂ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದೆ ಎಂಬ ಸಂದರ್ಭದಲ್ಲೇ ಮೂರು ದೇಶಗಳಲ್ಲಿ ಹೊಸ ರೂಪಾಂತರ ತಳಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಯುರೋಪಿಯನ್ ರಾಷ್ಟ್ರಗಳು ಈ ರಾಷ್ಟ್ರಗಳಿಗೆ ನಿರ್ಬಂಧ ಹೇರಿವೆ.
ನಮ್ಮಲ್ಲಿ ಹೊಸ ವೈರಸ್ ಇಲ್ಲ ರಾಜ್ಯದಲ್ಲೂ ಶನಿವಾರ ಸಭೆ ನಡೆಸಿ ಚರ್ಚಿಸಲಾಗಿದೆ. ನಮ್ಮಲ್ಲಿ ಹೊಸ ತಳಿಯ ವೈರಸ್ ಕಂಡು ಬಂದಿಲ್ಲ. ಆದರೆ ಧಾರವಾಡ, ಮೈಸೂರು, ಬೆಂಗಳೂರಿನ ವಿದ್ಯಾರ್ಥಿಗಳ ಹಾಸ್ಟೆಲ್ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕ್ಲಸ್ಟರ್ ರೂಪದಲ್ಲಿ ಹಳೆಯ ವೈರಸ್ ಕಾಣಿಸಿಕೊಂಡಿದ್ದು ಎಚ್ಚರ ವಹಿಸಬೇಕಿದೆ. ಈಗಾಗಲೇ ಹಾಸ್ಟೆಲ್ಗಳನ್ನು ಕಂಟೈನ್ಮೆಂಟ್ ವಲಯವೆಂದು ಗುರುತಿಸಿ ಎಲ್ಲರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಸಿಎಂ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ