ಡೇಟಾ ಸಂಗ್ರಹಿಸುತ್ತಿದ್ದ ಆ್ಯಪ್ಗಳನ್ನು ಬ್ಯಾನ್ !

ಸೋಮವಾರ, 11 ಏಪ್ರಿಲ್ 2022 (14:07 IST)
ವಾಷಿಂಗ್ಟನ್ : ಬಳಕೆದಾರರ ಫೋನ್ ನಂಬರ್ ಹಾಗೂ ಇತರ ಪ್ರಮುಖ ಡೇಟಾಗಳನ್ನು ರಹಸ್ಯವಾಗಿ ಸಂಗ್ರಹಿಸುತ್ತಿದ್ದ ಹತ್ತಾರು ಅಪ್ಲಿಕೇಶನ್ಗಳನ್ನು ಗೂಗಲ್ ಪ್ಲೇಸ್ಟೋರ್ನಿಂದ ಬ್ಯಾನ್ ಮಾಡಿದೆ.

ಗೂಗಲ್ ನಿಷೇಧಿಸಿರುವ ಆ್ಯಪ್ಗಳಲ್ಲಿ ಮುಖ್ಯವಾಗಿ 1 ಕೋಟಿಗೂ ಹೆಚ್ಚು ಬಾರಿ ಡೌನ್ಲೋಡ್ ಆಗಿದ್ದ ಮುಸ್ಲಿಂ ಪ್ರಾರ್ಥನೆಯ ಅಪ್ಲಿಕೇಶನ್ಗಳು, ಬಾರ್ಕೋಡ್ ಸ್ಕ್ಯಾನಿಂಗ್ ಅಪ್ಲಿಕೇಶನ್ಗಳು,

ಹೈವೇ ಸ್ಪೀಡ್ ಟ್ರ್ಯಾಪ್ ಡಿಟೆಕ್ಷನ್ ಅಪ್ಲಿಕೇಶನ್ ಹಾಗೂ ಇತರ ಹಲವಾರು ಬಳಕೆದಾರರ ಡೇಟಾಗಳನ್ನು ಸಂಗ್ರಹಿಸುತ್ತಿದ್ದ ಅಪ್ಲಿಕೇಶನ್ಗಳನ್ನು ಗೂಗಲ್ ಬ್ಯಾನ್ ಮಾಡಿದೆ. 

ಗೂಗಲ್ ಪ್ಲೇಸ್ಟೋರ್ನಿಂದ ನಿಷೇಧಿಸಲಾದ ಅಪ್ಲಿಕೇಶನ್ಗಳು ಬಳಕೆದಾರರ ಸ್ಥಳ ಮಾಹಿತಿ, ಇ-ಮೇಲ್, ಫೋನ್ ನಂಬರ್, ಹತ್ತಿರದ ಸಾಧನಗಳು ಹಾಗೂ ಪಾಸ್ವರ್ಡ್ಗಳನ್ನು ಸಂಗ್ರಹಿಸುತ್ತಿದ್ದವು ಎಂಬುದು ತಿಳಿದುಬಂದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ