ಅಮೆಜಾನ್, ಫ್ಲಿಪ್​ಕಾರ್ಟ್​ನಲ್ಲಿ ಭರ್ಜರಿ ಆಫರ್

ಸೋಮವಾರ, 7 ಆಗಸ್ಟ್ 2023 (13:35 IST)
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾದ ಆ್ಯಪಲ್ ಐಫೋನ್ 14 ಮೂಲಬೆಲೆ 79,900 ರೂ. ಆಗಿದೆ. ಆದರೀಗ ಈ ಫೋನ್ ಮೇಲೆ ಶೇ. 12 ರಷ್ಟು ಡಿಸ್ಕೌಂಟ್ ಘೋಷಿಸಲಾಗಿದೆ. ಈ ಫೋನ್ ಸದ್ಯ 69,999 ರೂ. ಗೆ ಸೇಲ್ ಆಗುತ್ತಿದೆ. ಜೊತೆಗೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ.
 
ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ಮೇಳಗಳ ಹಬ್ಬ ಶುರುವಾಗಿದೆ. ಅತ್ತ ಅಮೆಜಾನ್ನಲ್ಲಿ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಡೆಯುತ್ತಿದೆ. ಇತ್ತ ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ಭರ್ಜರಿ ಆಗಿ ಸಾಗುತ್ತಿದೆ. ಬಿಗ್ ಸೇವಿಂಗ್ ಡೇಸ್ ಸೇಲ್ ಆಗಸ್ಟ್ 9 ರ ವರೆಗೆ ನಡೆಯಲಿದೆ.

ಬಿಗ್ ಸೇವಿಂಗ್ ಡೇಸ್ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳ ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಪ್ರಸಿದ್ಧ 5ಜಿ ಬೆಂಬಲ ಪಡೆದುಕೊಂಡಿರುವ ಮೊಬೈಲ್ಗಳು ಅತಿ ಕಡಿಮೆ ದರಕ್ಕೆ ಸೇಲ್ ಆಗುತ್ತಿದೆ. ಇಲ್ಲಿದೆ ನೋಡಿ ಡಿಸ್ಕೌಂಟ್ ಪಡೆದುಕೊಂಡಿರುವ ಫೋನುಗಳ ಪಟ್ಟಿ.

ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾದ ಆ್ಯಪಲ್ ಐಫೋನ್ 14 ಮೂಲಬೆಲೆ 79,900 ರೂ. ಆಗಿದೆ. ಆದರೀಗ ಈ ಫೋನ್ ಮೇಲೆ ಶೇ. 12 ರಷ್ಟು ಡಿಸ್ಕೌಂಟ್ ಘೋಷಿಸಲಾಗಿದೆ. ಈ ಫೋನ್ ಸದ್ಯ 69,999 ರೂ. ಗೆ ಸೇಲ್ ಆಗುತ್ತಿದೆ. ಜೊತೆಗೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ.

ಇತ್ತ ಅಮೆಜಾನ್ನಲ್ಲಿ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ನಲ್ಲಿ ಐಫೋನ್ 14 ಪ್ರಸ್ತುತ 66,999 ರೂ. ಗೆ ಸೇಲ್ ಆಗುತ್ತಿದೆ. ಬಳಕೆದಾರರು 12,901 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಬ್ಯಾಂಕ್ ಕೊಡುಗೆಯನ್ನು ಉಪಯೋಗಿಸಿದರೆ 66,249 ರೂ. ಗೆ ಖರೀದಿಸಬಹುದು. ಈ ಬೆಲೆ 128ಉಃ ಸ್ಟೋರೇಜ್ ಮಾದರಿಯದ್ದು.

ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ನಲ್ಲಿ, ಆ್ಯಪಲ್ ಐಫೋನ್ 14 ಪ್ಲಸ್ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇದರ ಮೂಲಬೆಲೆ 99,900 ರೂ. ಆಗಿದೆ. ಆದರೀಗ ಈ ಫೋನ್ ಮೇಲೆ ಶೇ. 18 ರಷ್ಟು ಡಿಸ್ಕೌಂಟ್ ಘೋಷಿಸಲಾಗಿದೆ. ಈ ಫೋನ್ ಸದ್ಯ 72,999 ರೂ. ಗೆ ಸೇಲ್ ಆಗುತ್ತಿದೆ. ಜೊತೆಗೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ