ಬೆಂಗಳೂರಿನಲ್ಲಿ ರಣ ಮಳೆ ! ಯಾವ ಭಾಗದಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ?

ಸೋಮವಾರ, 22 ಮೇ 2023 (15:05 IST)
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಆರ್ಭಟ ಜೋರಾಗಿದ್ದು ಇಂದು, ನಾಳೆ ಹಾಗೂ ನಾಡಿದ್ದು ಒಟ್ಟು ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
 
ಪಂಜಾಬ್ನ ವಿದರ್ಭದಲ್ಲಿ ಸುಳಿಗಾಳಿ ಕಾಣಿಸಿಕೊಂಡಿದೆ. ಈ ಸುಳಿಗಾಳಿ ವಿದರ್ಭದಿಂದ ತಮಿಳುನಾಡಿನತ್ತ ಸಾಗುತ್ತಿದೆ. ಅಂದರೆ ಉತ್ತರ ಒಳನಾಡಿನಿಂದ ದಕ್ಷಿಣ ಒಳನಾಡಿನತ್ತ ಸುಳಿಗಾಳಿ ಸಾಗುತ್ತಿದೆ. ಹೀಗಾಗಿ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ.  

ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು, ಚಿತ್ರದುರ್ಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದಿನಿಂದ ಮೂರು ದಿನ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆ ಪ್ರಮಾಣ ಇರಲಿದೆ. ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಗುಡುಗು ಮಿಂಚಿನ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜಮಹಲ್ ಗುಟ್ಟಳ್ಳಿ – 65.50 ಮಿ.ಮೀ.
ಕೊಟ್ಟಿಗೆಪಾಳ್ಯ – 54 ಮಿ.ಮೀ.
ನಾಗಪುರ – 49 ಮಿ.ಮೀ.
ನಂದಿನಿ ಲೇಔಟ್ – 48 ಮಿ.ಮೀ.
ಪುಲಿಕೇಶಿ ನಗರ – 44 ಮಿ.ಮೀ.
ರಾಜಾಜಿನಗರ – 37 ಮಿ. ಮೀ.
ಕೆ.ಆರ್ ಪುರಂ – 36ಮಿ.ಮೀ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ