ಇಂದು ಕೊರೊನಾ ಪಾಸಿಟಿವಿಟಿ ರೇಟ್ ಎಷ್ಟು?

ಶುಕ್ರವಾರ, 4 ಮಾರ್ಚ್ 2022 (07:26 IST)
ಬೆಂಗಳೂರು : ರಾಜ್ಯದಲ್ಲಿ ಇಂದು 382 ಕೊರೊನಾ ಸೋಂಕು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ 239 ಕೇಸ್ ಗಳು ಪತ್ತೆಯಾಗಿದೆ.
 
ರಾಜ್ಯದಲ್ಲಿ ಇಂದು 689 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಲ್ಲಿವರೆಗೂ 38,97,928 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಂದು ಕೊರೊನಾದಿಂದ 10 ಜನರು ಸಾವನ್ನಪ್ಪಿದ್ದಾರೆ. ಇಲ್ಲಿವರೆಗೂ ರಾಜ್ಯದಲ್ಲಿ 39,41,835 ಸೋಂಕು ಇದೆ. ಇವರು ಇನ್ನೂ ಸೊಂಕಿನಿಂದ ಗುಣಮುಖರಾಗಬೇಕು. 

ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಶೇ.1.04%, ಸಾವಿನ ಪ್ರಮಾಣ 2.61% ಇದೆ. ರಾಜ್ಯದಲ್ಲಿ ಇಂದು 1,03,639 ಜನರು ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

ಆರೋಗ್ಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 00, ಬಳ್ಳಾರಿ 14, ಬೆಳಗಾವಿ 06, ಗ್ರಾ.ಬೆಂಗಳೂರು 01, ನ.ಬೆಂಗಳೂರು 239, ಬೀದರ್ 02, ಚಾಮರಾಜನಗರ 06, ಚಿಕ್ಕಬಳ್ಳಾಪುರ 03, ಚಿಕ್ಕಮಗಳೂರು 03, ಚಿತ್ರದುರ್ಗ 06, ದಕ್ಷಿಣ ಕನ್ನಡ 06, ದಾವಣಗೆರೆ 00, ಧಾರವಾಡ 11, ಗದಗ 013, ಹಾಸನ 05, ಹಾವೇರಿ 00, ಕಲಬುರಗಿ 06, ಕೊಡಗು 16, ಕೋಲಾರ 03, ಕೊಪ್ಪಳ 01, ಮಂಡ್ಯ 00, ಮೈಸೂರು 15, ರಾಯಚೂರು 00, ರಾಮನಗರ 00, ಶಿವಮೊಗ್ಗ 10, ತುಮಕೂರು 12, ಉಡುಪಿ 07, ಉತ್ತರ ಕನ್ನಡ 07, ವಿಜಯಪುರ 01 ಮತ್ತು ಯಾದಗಿರಿಯಲ್ಲಿ 01 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ