ದೇಶದಲ್ಲಿ ಎಷ್ಟು ಕೋವಿಡ್ ಲಸಿಕೆ ವ್ಯರ್ಥ?
ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು 16.48 ಲಕ್ಷ, ಉತ್ತರ ಪ್ರದೇಶದಲ್ಲಿ 12.60 ಲಕ್ಷ ಮತ್ತು ರಾಜಸ್ಥಾನದಲ್ಲಿ 6.86 ಲಕ್ಷ ಕೋವಿಡ್ ಡೋಸ್ ವ್ಯರ್ಥವಾಗಿದೆ. ಈ ಮೂರು ರಾಜ್ಯಗಳನ್ನು ತೆಗೆದುಕೊಂಡರೆ ಒಟ್ಟಾರೆಯಾಗಿ 36 ಲಕ್ಷದಷ್ಟು ನಷ್ಟವಾಗಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್, ಕಳೆದ 11 ತಿಂಗಳಲ್ಲಿ ಕೊರಾನಾ ಡೋಸ್ ವ್ಯರ್ಥ ಮಾಡಿರುವ ರಾಜ್ಯಗಳ ಪಟ್ಟಿಯನ್ನು ಪ್ರಸ್ತುತಪಡಿಸಿದ್ದು, ಒಂದು ಲಕ್ಷಕ್ಕೂ ಅಧಿಕ ಲಸಿಕೆಯನ್ನು ಹಾಳುಮಾಡಿರುವ ರಾಜ್ಯಗಳ ಪಟ್ಟಿಯನ್ನು ನೀಡಿದ್ದಾರೆ.