ಮಗ ತೆರಿಗೆದಾರನಾಗಿದ್ದರೆ ತಾಯಿಗೆ 2 ಸಾವಿರ ಸಿಗಲ್ಲ

ಶನಿವಾರ, 10 ಜೂನ್ 2023 (09:04 IST)
ಬೆಂಗಳೂರು : ಗ್ಯಾರಂಟಿ ಗೊಂದಲಗಳ ಬಗ್ಗೆ ಜನಾಕ್ರೋಶ ಹೆಚ್ಚಾಗುತ್ತಿದ್ದರೂ ಸರ್ಕಾರ ಮಾತ್ರ ಹೊಸ ಹೊಸ ಷರತ್ತುಗಳನ್ನು ಹಾಕುತ್ತಲೇ ಇದೆ. ಇವತ್ತು ಗೃಹಲಕ್ಷ್ಮಿ ಯೋಜನೆಗೆ ಇನ್ನೊಂದು ಷರತ್ತು ಸೇರ್ಪಡೆಯಾಗಿದೆ.
 
ಮಗ ತೆರಿಗೆದಾರನಾಗಿದ್ದರೆ ತಾಯಿಗೆ 2000 ರೂಪಾಯಿ ಸಿಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ಬಾಂಬ್ ಸಿಡಿಸಿದ್ದಾರೆ. ಸರ್ಕಾರ ವಿಧಿಸುತ್ತಿರುವ ಷರತ್ತುಗಳ ಬಗ್ಗೆ ವಿಪಕ್ಷಗಳು ಮಾತ್ರವಲ್ಲ ಹಲವು ಸಚಿವರು ಕೂಡ ಆಂತರಿಕವಾಗಿ ಆಕ್ಷೇಪ ಎತ್ತುತ್ತಿದ್ದಾರೆ.

ಜನಾಕ್ರೋಶ, ವಿಪಕ್ಷಗಳ ಟೀಕೆ ಲಘುವಾಗಿ ಪರಿಗಣಿಸಬೇಡಿ. ನಿರೀಕ್ಷೆ ಇಟ್ಟು ಜಾರಿ ಮಾಡಿರೋ ಗ್ಯಾರಂಟಿಗಳ ಲಾಭ ಪಕ್ಷಕ್ಕೆ ಸಿಗಬೇಕು. ಗ್ಯಾರಂಟಿಗಳೇ ನಮಗೆ ಮುಳುವಾಗಬಾರದು ಎಂದು ಸಲಹೆ ನೀಡಿದ್ದಾರೆ.  

ಜನ ಸುಮ್ಮನಾಗದಿದ್ದರೆ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಹಾನಿ ಖಚಿತ. ಬಿಜೆಪಿ ಕೈಗೆ ಯಾವ ಕಾರಣಕ್ಕೂ ಗ್ಯಾರಂಟಿ ಅಸ್ತ್ರ ಸಿಗಬಾರದು. ಮುಂದೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಬಿಬಿಎಂಪಿ, ಲೋಕಸಭೆ ಚುನಾವಣೆ ಬರುತ್ತಿದೆ. ದುಡುಕದೇ ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ ಎಂದು ಕೆಲವರು ಸಿಎಂ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ