ವಿಪಕ್ಷಗಳು ಪ್ರಣಾಳಿಕೆಗೆ ಮಹತ್ವ ನೀಡುತ್ತಿಲ್ಲ: ಸಿಎಂ ಸಿದ್ದರಾಮಯ್ಯ

ಶುಕ್ರವಾರ, 27 ಏಪ್ರಿಲ್ 2018 (14:24 IST)
ಬೇರೆ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡ್ತಾರೆ, ಆದರೆ ಜಾರಿಗೆ ತರುವ ಬಗ್ಗೆ ಪ್ರಮಾಣಿಕವಾಗಿ ಜಾರಿಗೊಳಿಸಲು ಪ್ರಯತ್ನ ಮಾಡುವುದಿಲ್ಲ.

ಆದರೆ ಕಾಂಗ್ರೆಸ್ ತನ್ನ ಕಳೆದ ಅವಧಿಯಲ್ಲಿ ಪ್ರಣಾಳಿಕೆಯಲ್ಲಿ ಹೇಳಿದ 165 ಭರವಸೆಯಲ್ಲಿ ಶೇಕಡಾ 99 ರಷ್ಟು ಜಾರಿಗೆ ತಂದಿದ್ದೇವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 
 
31 ವಿಭಾಗದ ಅಭಿವೃದ್ಧಿ ಕಾರ್ಯದಲ್ಲಿ ಕರ್ನಾಟಕದ ನಂಬರ್ ಒನ್ ಸ್ಥಾನ ದಲ್ಲಿದೆ. ಕೇಂದ್ರದ ನೀತಿ ಆಯೋಗವೇ ಕಾರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಕರ್ನಾಟಕದ ಎಪಿಎಂಸಿ ಆನ್ ಲೈನ್ ವಹಿವಾಟ್ ದೇಶಕ್ಕೆ ಮಾದರಿಯಾಗಿದೆ. ಈ ಯೋಜನೆಯನ್ನು ದೇಶದೆಲ್ಲಡೆ ಜಾರಿಗೊಳಿಸಲು ಕೇಂದ್ರವೇ ಸೂಚನೆ ನೀಡಿದೆ ಎಂದರು.
 
ಬಂಡವಾಳ ಹೂಡಿಕೆಯಲ್ಲೂ ಕರ್ನಾಟಕದ ಮೂಂಚೂಣಿಯಲ್ಲಿದೆ.ಬಿಜೆಪಿ ಕೇವಲ ಸುಳ್ಳು ಪ್ರಚಾರವನ್ನಷ್ಟೇ ಮಾಡುತ್ತಿದೆ. ಕರಾವಳಿಯಲ್ಲಿ ಕಳೆದ ಬಾರಿ ಅತೀ ಹೆಚ್ಚು ಕಾಂಗ್ರೆಸ್ ಸೀಟು ಪಡೆಯಲು ಕಾರಣಕರ್ತರಾದ ಕರಾವಳಿ ಜನರಿಗೆ ಸೆಲ್ಯೂಟ್ ಹೇಳುವುದಾಗಿ ಮುಖ್ಯಮಂತ್ರಿ ತಿಳಿಸಿದರು. ಇದು ಜನರ ಪ್ರಣಾಳಿಕೆ, ನುಡಿದಂತೆ ನಡೆಯುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ