ಪ್ರವಾಸ ಪ್ರಿಯರಿಗೆ IRCTC ಗುಡ್ ನ್ಯೂಸ್

ಶುಕ್ರವಾರ, 26 ನವೆಂಬರ್ 2021 (18:05 IST)
ಮೈಸೂರು : ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಮ್ ಕಾರ್ಪೊರೇಷನ್ ಲಿಮಿಟೆಡ್ ರೈಲ್ವೆ ಸಚಿವಾಲಯ ಅಡಿಯಲ್ಲಿನ ಒಂದು ಸಾರ್ವಜನಿಕ ಉದ್ಯಮವಾಗಿದ್ದು,
ಈ ಬಾರಿ ಸಾರ್ವಜನಿಕರು ಮತ್ತು ಯಾತ್ರಾರ್ಥಿಗಳಿಗಾಗಿ ವಿವಿಧ ಯಾತ್ರಾ ಯೋಜನೆ ಆರಂಭಿಸಿದೆ.
 ಈ ಬಾರಿ ಹರಿಹರ ದರ್ಶನ ಯಾತ್ರಾ ಮತ್ತು ಸರ್ದಾರ್ ವಲ್ಲಭಾಯಿ ಪಟೇಲ್ ಪ್ರತಿಮೆ ವೀಕ್ಷಣೆ ಎಂಬ 10 ರಾತ್ರಿ, 11 ಹಗಲುಗಳ ಒಂದು ವಿಶೇಷ ಪ್ರವಾಸಿ ರೈಲು ಪ್ರವಾಸವನ್ನು ಆಯೋಜಿಸಿದೆ. ಈ ವಿಶೇಷ ಪ್ರವಾಸಿ ರೈಲು ಡಿ. 10 ರಂದು ಮಧುರೈ ರೈಲು ನಿಲ್ದಾಣದಿಂದ ಹೊರಟು ಅಹಮದಾಬಾದ್ ಅಕ್ಷರ್ ಧಾಮ್ ಮಂದಿರ್- ನಿಶ್ಕಳಂಕ ಮಹಾದೇವ -ದ್ವಾರಕಾ-ಬೆಟ್ ದ್ವಾರಕಾ-ನಾಗೇಶ್ವರ್ (ಜ್ಯೋತಿರ್ಲಿಂಗ್)-ಸೋಮನಾಥ (ಜ್ಯೋತಿರ್ಲಿಂಗ)-ಉಜ್ಜಯಿನಿ ಮಹಾಕಾಳೇಶ್ವರ (ಜ್ಯೋತಿರ್ಲಿಂಗ)- ಓಂಕಾರೇಶ್ವರ (ಜ್ಯೋತಿರ್ಲಿಂಗ) ಮತ್ತು ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪ್ರತಿಮೆ ವೀಕ್ಷಣೆ ಮಾಡಬಹುದು.
ಕರ್ನಾಟಕದ ಭಕ್ತರು ಹಾಗೆ ಪ್ರವಾಸಿಗರ ಅನುಕೂಲವಾಗುವಂತೆ ಈ ಪ್ರವಾಸಿ ರೈಲು ಬೆಂಗಳೂರು , ತುಮಕೂರು, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ ಮತ್ತು ಬೆಳಗಾವಿ ಮಾರ್ಗವಾಗಿ ಹೋಗಲಿದೆ.
ಸ್ಲಿಪರ್ ಕ್ಲಾಸ್ ರೈಲು ಪ್ರಯಾಣದಲ್ಲಿ ರಾತ್ರಿ ಉಳಿಯಲು ಅಥವಾ ಫ್ರೆಶ್ ಆಗಲು ಧರ್ಮಶಾಲಾ, ಹಾಲ್, ಡಾರ್ಮಿಟರಿ ವ್ಯವಸ್ಥೆ ಬಹು ಹಂಚಿಕೆ ಆಧಾರದ ಮೇಲೆ ನೀಡಲಾಗುವುದು. ಬೆಳಗಿನ ಟೀ, ಕಾಫಿ, ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ, ಜೊತೆಗೆ ದಿನಕ್ಕೆ ಒಂದು ಲೀಟರ್ ಕುಡಿವ ನೀರಿನ ಬಾಟಲ್ ನೀಡಲಾಗುವದು. ಸಾಮಾನ್ಯ ಬಸ್ಸುಗಳಲ್ಲಿ ಸ್ಥಳೀಯ ಸ್ಥಳಗಳ ವೀಕ್ಷಣೆ, ಪ್ರವಾಸಿ ವ್ಯವಸ್ಥಾಪಕರು ಮತ್ತು ಭದ್ರತೆ ಸಿಬ್ಬಂದಿ ಇರಲಿದ್ದು, ಪ್ರಯಾಣ ವಿಮೆ ಮಾಡಿಸಲಾಗುವುದು. ಈ ಪ್ರವಾಸಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಿ ನೌಕರರು, ಎಲ್ಟಿಸಿ ಸೌಲಭ್ಯ ಕೂಡ ಪಡೆಯಬಹುದು. ಈ ಪ್ರವಾಸಕ್ಕೆ ಐಆರ್ಸಿಟಿಸಿ ಕೌಂಟರ್ಗಳಲ್ಲಿ ಮತ್ತು ಆನ್ಲೈನ್ ಮೂಲಕ ಬುಕ್ಕಿಂಗ್ ಆರಂಭಿಸಲಾಗಿದೆ.
ಬುಕಿಂಗ್ ಅಥವಾ ವಿವರಗಳಿಗೆ ಮೈಸೂರು ರೈಲು ನಿಲ್ದಾಣ ಮೊ. 85959 31294 ಸಂಪರ್ಕಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ