ಸೋಂಕಿತರಲ್ಲಿ ಯವಕರದ್ದೇ ಸಿಂಹಪಾಲು! ಸೋಂಕಿಗೆ ಕಾರಣವೇನು?

ಸೋಮವಾರ, 10 ಜನವರಿ 2022 (07:21 IST)
ಬೆಂಗಳೂರು : ಬೆಂಗಳೂರಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಈಗಾಗಗಲೇ 3ನೇ ಅಲೆ ಪ್ರಾರಂಭವಾಗುತ್ತಿದೆ ಎಂಬ ಭೀತಿಯಲ್ಲಿ ಜನರಿದ್ದಾರೆ.
 
ವಯೋಮಾನದವರಿಗಿಂತ ಯುವ ಸಮುದಾಯ ಸಮಾಜದಲ್ಲಿ ಹೆಚ್ಚು ಸಕ್ರಿಯವಾಗಿರುವುದು ಪ್ರಮುಖ ಕಾರಣವಾಗಿದೆ. ಹೊರಗಡೆ ಹೋಗಿ ದುಡಿಯುತ್ತಿರುವವರಲ್ಲಿ ಯುವ ಸಮೂದಾಯದ ಸಂಖ್ಯೆ ಅಧಿಕವಾಗಿದೆ.

ಇದರಿಂದಾಗಿ ಅವರು ಇತರರ ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ಚಿರುವುದರಿಂದ ಯುವ ಜನಾಂಗದಲ್ಲಿ ಕೊರೊನಾ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಮತ್ತೊಂದು ಪ್ರಮುಖ ಕಾರಣವೆಂದರೆ ಇತ್ತೀಚಿನ ದಿನಗಳಲ್ಲಿ ಕೊರೊನಾವನ್ನು ಎಲ್ಲರೂ ನಿರ್ಲಕ್ಷಿಸುತ್ತಿದ್ದಾರೆ. ಅದರಲ್ಲೂ ಯುವ ಜನತೆಯಲ್ಲಿ ಸೋಂಕಿನ ಬಗ್ಗೆ ಹೆಚ್ಚುತ್ತಿರುವ ನಿರ್ಲಕ್ಷ್ಯದಿಂದ ಉಲ್ಬಣಗೊಂಡಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ