ಭಾರತವನ್ನೂ ಟಾರ್ಗೆಟ್ ಮಾಡಿದೆ ಬೇಹುಗಾರಿಕಾ ಬಲೂನ್?

ಗುರುವಾರ, 9 ಫೆಬ್ರವರಿ 2023 (11:27 IST)
ವಾಷಿಂಗ್ಟನ್ : ತನ್ನ ವಾಯು ಪ್ರದೇಶದ ಮೇಲೆ ಪತ್ತೆಯಾಗಿದ್ದ ಚೀನಾದ ಬೇಹುಗಾರಿಕಾ ಬಲೂನ್ನ್ನು ಅಮೆರಿಕ ಹೊಡೆದುರುಳಿಸಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಅಚ್ಚರಿದಾಯಕ ಸುದ್ದಿ ಬಹಿರಂಗವಾಗಿದೆ.

ಭಾರತ, ಜಪಾನ್ ಸೇರಿದಂತೆ ಹಲವು ದೇಶಗಳನ್ನು ಗುರಿಯಾಗಿಸಿಕೊಂಡು ಚೀನಾ ಸ್ಪೈ ಬಲೂನ್ಗಳ ಬೇಹುಗಾರಿಕೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಅಟ್ಲಾಂಟಿಕ್ ಸಾಗರದ ಮೇಲಿನ ವಾಯುಪ್ರದೇಶದಲ್ಲಿ ಮಿಸೈಲ್ ಬಳಸಿ ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಅಮೆರಿಕ ಹೊಡೆದುರುಳಿಸಿತ್ತು. ಈ ಬಗ್ಗೆ ಭಾರತ ಸೇರಿ ಮಿತ್ರರಾಷ್ಟ್ರಗಳಿಗೆ ಅಮೆರಿಕ ವಿವರಿಸಿತ್ತು. ಡೆಪ್ಯೂಟಿ ಸೆಕ್ರೆಟರಿ ಆಫ್ ಸ್ಟೇಟ್ ವೆಂಡಿ ಶೆರ್ಮನ್ ವಾಷಿಂಗ್ಟನ್ನಲ್ಲಿರುವ ಸುಮಾರು 40 ರಾಯಭಾರ ಕಚೇರಿಗಳಿಗೆ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ