ಮಮತಾ ಬ್ಯಾನರ್ಜಿ ಕಾಂಗ್ರೆಸ್ ಗೆ ಕೈ ಕೊಡಲು ಮುಂದಾಗಿರುವುದೇಕೆ ಗೊತ್ತಾ?
ಭಾನುವಾರ, 7 ಅಕ್ಟೋಬರ್ 2018 (07:48 IST)
ನವದೆಹಲಿ: ಮಾಯಾವತಿ ನಂತರ ಮಮತಾ ಬ್ಯಾನರ್ಜಿ ಕೂಡಾ ಕಾಂಗ್ರೆಸ್ ನ ಮಹಾಘಟಬಂಧನ್ ನಿಂದ ಹೊರಬರಲು ಚಿಂತನೆ ನಡೆಸಿರುವುದು ಏಕೆ?
ಈ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕ ಚಂದನ್ ಮಿತ್ರ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಮಮತಾ ಬ್ಯಾನರ್ಜಿಗೆ ಕಾಂಗ್ರೆಸ್ ನ ಸಹಾಯ ಬೇಕಾಗಿಲ್ಲ ಎಂದು ಚಂದನ್ ಮಿತ್ರ ಹೇಳಿದ್ದಾರೆ.
ಈ ಮೂಲಕ ಮಮತಾ ಕೂಡಾ ಮಹಾಘಟಬಂಧನ್ ಗೆ ಕೈಕೊಡಲು ಮುಂದಾಗಿದ್ದಾರೆ ಎನ್ನುವ ಸುದ್ದಿಗೆ ಪುಷ್ಠಿ ಬಂದಿದೆ. ಪಶ್ಚಿಮ ಬಂಗಾಲದಲ್ಲಿ ಬಿಜೆಪಿಗೆ ವಿರೋಧಿ ಶಕ್ತಿಯಾಗಿ ಇರುವುದು ಮಮತಾ ಬ್ಯಾನರ್ಜಿ ಮಾತ್ರ. ಅವರು ಏಕಾಂಗಿಯಾಗಿ ಹೋರಾಡುವ ಶಕ್ತಿ ಹೊಂದಿದ್ದಾರೆ ಎಂದು ಚಂದನ್ ಮಿತ್ರ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಗೆ ಶಾಕ್ ಕೊಡುವ ಸೂಚನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.