ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್​ಗೆ ಮೋದಿ ತಿರುಗೇಟು

ಭಾನುವಾರ, 26 ಸೆಪ್ಟಂಬರ್ 2021 (09:01 IST)
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ನಡೆಸಿದರು. ಈ ವೇಳೆ ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಕೆಲವು ರಾಷ್ಟ್ರಗಳು ಭಯೋತ್ಪಾದನೆಯನ್ನು ರಾಜಕೀಯ ದಾಳವಾಗಿ ಬಳಕೆ ಮಾಡುತ್ತಿದೆ.

ಜಗತ್ತಿನಲ್ಲಿ ಉಗ್ರವಾದದ ಅಪಾಯ ಹೆಚ್ಚುತ್ತಿದೆ. ಈ ಭಯೋತ್ಪಾದನೆ ಎದುರಾಳಿ ದೇಶಕ್ಕೆ ಮಾತ್ರವಲ್ಲ, ಅವರಿಗೂ ಅಪಾಯ ಎಂಬುದನ್ನು ಅವರು ಮರೆಯಬಾರದು ಎಂದು ಇದೇ ವೇಳೆ ಕಿವಿಮಾತು ಹೇಳಿದರು.
ಇದೇ ವೇಳೆ ಅಫ್ಘಾನ್ ನೂತನ ಸರ್ಕಾರದ ಕುರಿತು ಮಾತನಾಡಿದ ಅವರು, ಅಫ್ಘಾನಿಸ್ತಾನವೂ ಭಯೋತ್ಪಾದನೆಯನ್ನು ಪ್ರಚೋದಿಸಬಾರರು. ಕೆಲವರು ಅಫ್ಘಾನಿಸ್ತಾನದ ಪರಿಸ್ತಿತಿ ಲಾಭ ಪಡೆಯಲು ಮುಂದಾಗಿದ್ದಾರೆ. ಪ್ರಾಕ್ಸಿ ಯುದ್ಧ, ಭಯೋತ್ಸಾದನೆ ಮತ್ತು ಅಫ್ಘಾನಿಸ್ತಾನದ ಪರಿಸ್ಥಿತಿ ನಮಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದೆ. ವಿಶ್ವಸಂಸ್ಥೆ ಕೂಡ ಅದರ ಪ್ರಸ್ತುತತೆಗೆ ತಕ್ಕಂತೆ ವರ್ತಿಸಬೇಕು ಎಂದರು
ಲಸಿಕೆ ಉತ್ಪಾದನೆಗೆ ಆಹ್ವಾನ
ಭಾರತವು ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದೆ. ಭಾರತವು ಈಗಾಗಲೇ ಡಿಎನ್ಎ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಇದನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು. ಸದ್ಯ ನಾವು ನಾವು ಲಸಿಕೆಯನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದ್ದೇವೆ. ಮೂಗಿನ ಮೂಲಕ ಲಸಿಕೆ ನೀಡುವುದನ್ನು ಅಭಿವೃದ್ಧಿ ಪಡಸಿದ್ದೇವೆ. ನಾವು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಲಸಿಕೆಗಳನ್ನು ಒದಗಿಸುತ್ತಿದ್ದೇವೆ. ಭಾರತದಲ್ಲಿ ಲಸಿಕೆ ತಯಾರಿಸಲು ಎಲ್ಲಾ ಲಸಿಕೆ ತಯಾರಕರನ್ನು ಆಹ್ವಾನಿಸುತ್ತೇನೆ. ನಮ್ಮಲ್ಲಿ ತಂತ್ರಜ್ಞಾನ ಆಧಾರಿತ ಪ್ರಜಾಪ್ರಭುತ್ವವಿದೆ ಎಂದು ತಿಳಿಸಿದರು

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ