ತಿರುವನಂತಪುರಂ : ಕೇರಳ ರಾಜ್ಯ ಚೆಲ್ಲಿ ಸಾರಿಗೆ ಸಂಸ್ಥೆಯ ಉದ್ಯೋಗಿಗಳಿಗೆ 12 ಗಂಟೆಗಳ ಕರ್ತವ್ಯ ವ್ಯವಸ್ಥೆ ಜಾರಿಗೊಳಿಸಲು ಕೇರಳದ ಎಲ್ಡಿಎಫ್ ಸರ್ಕಾರ ನಿರ್ಧರಿಸಿದೆ.
ಈಗಾಗಲೇ ಕೇರಳದಲ್ಲಿರುವ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ ಹಾಗಾಗಿ ನಷ್ಟದಲ್ಲಿ ಇರುವ ಸಾರಿಗೆ ಸಂಸ್ಥೆಯನ್ನು ಲಾಭದ ಹಳಿಗೆ ತರುವ ನಿಟ್ಟಿನಲ್ಲಿ ಈ ಕ್ರಮವೆಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್ ಬೆಂಬಲಿತ ಟ್ರಾನ್ಸ್ಪೋರ್ಟ್ ಡೆಮಾಕ್ರಾಟಿಕ್ ಫೆಡರೇಷನ್ ಒಂದೇ ಹಂತದ ಕರ್ತವ್ಯದ ಅವಧಿಗೆ ಬೆಂಬಲ ಇದೆ, ಆದರೆ, 12 ಗಂಟೆಗಳ ಬದಲಾಗಿ 8 ಗಂಟೆ ಇರಲಿ ಎಂದಿದೆ. ಕೆಲ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಜೊತೆಗೆ ವಾರದ 6 ದಿನ ಕರ್ತವ್ಯ ನಿರ್ವಹಿಸಲು ನೌಕರರಿಗೆ ಸರ್ಕಾರ ಅವಕಾಶ ಮಾಡಿಕೊಡಲಿದೆ.
ಈಗಾಗಲೇ ಸಿಬ್ಬಂದಿ ಕೊರತೆಯಿಂದ ಡಿಪೋಗಳಲ್ಲಿ ನಿಂತಿರುವ 1,300 ಬಸ್ಗಳ ಸೇವೆಯನ್ನು ಮತ್ತೆ ಆರಂಭಿಸಲು ಸರ್ಕಾರ ಚಿಂತಿಸಿದ್ದು, 8 ಗಂಟೆಗಳ ಕರ್ತವ್ಯಕ್ಕೆ ಬದಲಾಗಿ ನಾಲ್ಕು ಗಂಟೆ ಹೆಚ್ಚುವರಿ ಕರ್ತವ್ಯ ನಿರ್ವಹಿಸುವ ಬಸ್ ಸಿಬ್ಬಂದಿಗೆ ಹೆಚ್ಚುವರಿ ಭತ್ಯೆ ನೀಡಲು ಸರ್ಕಾರ ನಿರ್ಧರಿಸಿದೆ.