ದೆಹಲಿಯಲ್ಲಿ ಕಳಪೆ ಮಟ್ಟಕ್ಕೆ ಇಳಿದ ವಾಯುಗುಣ !

ಶುಕ್ರವಾರ, 12 ನವೆಂಬರ್ 2021 (16:18 IST)
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದೂ ಕೂಡ ವಾಯುಗುಣಮಟ್ಟ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದೆ. ಸತತ ಎಂಟು ದಿನದಿಂದ ವಾಯು ಗುಣಮಟ್ಟದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ.
ಇಂದು ದೆಹಲಿಯಲ್ಲಿ ವಾಯುಗುಣಮಟ್ಟ ಸೂಚ್ಯಂಕ 360 ರಷ್ಟಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಗೋಧಿ ಕಡ್ಡಿ ಸುಡುವುದು ಮುಂದುವರೆದಿರುವುದರಿಂದ ದೆಹಲಿಗೆ ಹೆಚ್ಚು ವಾಯುಮಾಲಿನ್ಯ ಆಗುತ್ತಿದೆ. ಹೀಗಾಗಿ ಇನ್ನೂ ಕೆಲವು ದಿನಗಳ ಕಾಲ ವಾಯು ಗುಣಮಟ್ಟ ಕಳಪೆಯಾಗಿಯೇ ಇರಲಿದೆ ಅಂತ  Sಂಈಂಖ ಮುನ್ಸೂಚನೆ ನೀಡಿದೆ. ಸದ್ಯ ದಿನದಿಂದ ದಿನಕ್ಕೆ ವಾತವಾರಣ ಹದಗೆಡುತ್ತಿರುವುದರಿಂದ ದೆಹಲಿ ಜನರು ಉಸಿರಾಡಲು ತೊಂದರೆ ಉಂಟಾಗುತ್ತಿದ್ದು, ಗಂಟಲು ತುರಿಕೆ, ಮತ್ತಿತರ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ