ಲಕ್ನೋ : ಉತ್ತರ ಪ್ರದೇಶ ಸರ್ಕಾರವು ರಾಜ್ಯದಲ್ಲಿನ ಮದರಸಾಗಳ ಸಮಯವನ್ನು ಒಂದು ಗಂಟೆ ವಿಸ್ತರಿಸಿದೆ ಮತ್ತು ಇದರ ಪರಿಷ್ಕೃತ ಸಮಯವು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.
ಇನ್ನು ಮುಂದೆ ಆರು ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಮದರಸಾಗಳು ಈ ನಿರ್ಧಾರವನ್ನು ಸ್ವಾಗತಿಸಿವೆ. ಆದರೆ ನಮಾಜ್ ಮಾಡುವ ಸಮಯ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿವೆ.
ರಾಜ್ಯ ಮದರಸಾ ಶಿಕ್ಷಣ ಮಂಡಳಿಯು ಅನುದಾನಿತ ಮದರಸಾಗಳಿಗೆ ಹೊಸ ವೇಳಾಪಟ್ಟಿಯನ್ನು ಹೊರಡಿಸಿದ್ದು, ಅದರ ಪ್ರಕಾರ ತರಗತಿಗಳು ಬೆಳಗ್ಗೆ 9 ಗಂಟೆಗೆ ಪ್ರಾರ್ಥನೆ ಮತ್ತು ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಗುತ್ತದೆ.
ತರಗತಿಗಳು ಬೆಳಗ್ಗೆ 9:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿವೆ. 30 ನಿಮಿಷಗಳ ಊಟದ ವಿರಾಮದ ನಂತರ, ತರಗತಿಗಳು 12:30 ಕ್ಕೆ ಪುನರಾರಂಭಗೊಳ್ಳುತ್ತವೆ ಮತ್ತು 3 ಗಂಟೆಯವರೆಗೆ ಇರುತ್ತದೆ.