ನವದೆಹಲಿ : ದೇಶಾದ್ಯಂತ ಟೊಮೆಟೋ ದರದಲ್ಲಿ ಏರಿಕೆ ಕಂಡುಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಬೆಲೆ ಏರಿಕೆಗೆ ಮೂಗುದಾರ ಹಾಕಲು ಮುಂದಾಗಿದೆ.
ಹೌದು. ಕಳೆದ ಒಂದು ತಿಂಗಳಿಂದ ಟೊಮೆಟೋ ದರ ಗಗನಕ್ಕೇರಿದೆ. ಇದೀಗ ದರ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕರ್ನಾಟಕ, ಮಹಾರಾಷ್ಟ್ರ, ಆಂಧ್ರದ ಮಂಡಿಗಳಿಂದ ಟೊಮೆಟೋ ಖರೀದಿಸಿ ಸಾರ್ವಜನಿಕ ಬಳಕೆಗೆ ವಿತರಣೆ ಮಾಡುವಂತೆ ಸಹಕಾರಿ ಸಂಸ್ಥೆಗಳಾದ ನಾಫೆಡ್ ಮತ್ತು ಎನ್ಸಿಸಿಎಫ್ಗೆ ನಿರ್ದೇಶನ ನೀಡಿದೆ. ಟೊಮೆಟೋ ಬೆಲೆ ಹೆಚ್ಚಳವಿರುವ ನಗರಗಳಿಗೆ ಪೂರೈಕೆ ಮಾಡುವಂತೆ ಆದೇಶಿಸಿದೆ.
ಭಾರೀ ಮಳೆಯಿಂದಾಗಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಟೊಮೆಟೋ ದರ 200 ರೂಪಯಿಯ ಗಡಿ ದಾಟಿದೆ. ಹೀಗಾಗಿ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ದಕ್ಷಿಣದ ರಾಜ್ಯಗಳಿಂದ ಟೊಮೆಟೋ ಖರೀದಿಸಲಿದೆ.