ಡೆಹ್ರಾಡೂನ್ : ದೇಶದಲ್ಲಿ ಟೊಮೆಟೋ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದೇ ರೀತಿ ಉತ್ತರಾಖಂಡದಲ್ಲಿ ಟೊಮೆಟೋ ಕೆಜಿಗೆ 200-250 ರೂ. ಆಗಿದ್ದು, ಬೆಲೆ ಏರಿಕೆಯಿಂದ ಗ್ರಾಹಕರು ಹೈರಾಣಾಗಿದ್ದಾರೆ.
ಉತ್ತರಕಾಶಿಯಲ್ಲಿ ಟೊಮೆಟೋ ಅತ್ಯಂತ ದುಬಾರಿಯಾಗಿದ್ದು, ಗಂಗೋತ್ರಿ ಮತ್ತು ಯಮುನೋತ್ರಿಯಲ್ಲಿ ಕೆಜಿಗೆ 200-250 ರೂ. ಇದೆ. ಇದರಿಂದ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದು, ಟೊಮೆಟೋ ಖರೀದಿಸಲು ಮುಂದಾಗುತ್ತಿಲ್ಲ ಎಂದು ತರಕಾರಿ ಮಾರಾಟಗಾರ ರಾಕೇಶ್ ತಿಳಿಸಿದ್ದಾರೆ.
ಕಳೆದ ವರ್ಷ ಸುರಿದ ಭಾರೀ ಮಳೆಯ ಪರಿಣಾಮ ಹಲವೆಡೆ ಟೊಮೆಟೋ ಬೆಳೆಗಳು ನಾಶವಾಗಿದ್ದವು. ಇದರಿಂದ ಪೂರೈಕೆ ಸರಪಳಿಯಲ್ಲಿ ಅಡಚಣೆಗಳು ಉಂಟಾಗಿದ್ದು, ತರಕಾರಿಗಳ ದರ ತೀವ್ರ ಏರಿಕೆಯಾಗಿದೆ ಎಂದು ಹಲವರು ಹೇಳುತ್ತಾರೆ. ಅಲ್ಲದೇ ಟೊಮೆಟೋ ಅಲ್ಪಾವಧಿಯ ತರಕಾರಿಯಾದ್ದರಿಂದ ಪ್ರತಿ ವರ್ಷ ಈ ಸಮಯದಲ್ಲಿ ಬೆಲೆ ಏರಿಕೆಯಾಗುತ್ತದೆ.