ಹಳೆ ಪಿಂಚಣಿ ಪಡೆಯಲು ಅವಕಾಶ, ಸರ್ಕಾರದಿಂದ ಮಾರ್ಗಸೂಚಿ

ಶುಕ್ರವಾರ, 20 ಆಗಸ್ಟ್ 2021 (08:39 IST)
ಬೆಂಗಳೂರು: ರಾಷ್ಟ್ರೀಯ ಪಿಂಚಣಿ ಯೋಜನೆ NPS ಬದಲಿಗೆ 2006 ಕ್ಕಿಂತ ಮೊದಲು ಇದ್ದ ಹಳೆಯ ಪಿಂಚಣಿ(OPS) ಪಡೆಯಲು ಮೃತ ಸರ್ಕಾರಿ ನೌಕರರ ಕುಟುಂಬದವರಿಗೆ ಅವಕಾಶ ಕಲ್ಪಿಸಿ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಪಿಂಚಣಿ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದ್ದು, 2018ರ ನಂತರ ಮೃತಪಟ್ಟ ಸರ್ಕಾರಿ ನೌಕರರ ಕುಟುಂಬದವರು ಹಳೆ ಪಿಂಚಣಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಕುಟುಂಬದವರಿಂದ ಪಿಂಚಣಿ ಪಡೆಯಲು ಒಪ್ಪಿಗೆ ಪತ್ರ, ನೌಕರರ ಮರಣ ಪ್ರಮಾಣಪತ್ರ ಮತ್ತು NPS ಬ್ಯಾಲೆನ್ಸ್ ಶೀಟ್ ಖಜಾನೆ ಇಲಾಖೆಗೆ ನೀಡಬೇಕು. ಮಹಾಲೆಕ್ಕಪಾಲಕರ ಮೂಲಕ ಮಂಜೂರಾತಿ ಪಡೆದುಕೊಂಡು ಹಳೆ ಪಿಂಚಣಿಗೆ ಒಳಪಡಿಸಬೇಕೆಂದು ಹೇಳಲಾಗಿದೆ.
2018ರ ನಂತರ ಮೃತಪಟ್ಟ ಸರ್ಕಾರಿ ನೌಕರರ ಕುಟುಂಬದವರಿಗೆ ಷರತ್ತಿಗೆ ಒಳಪಟ್ಟು 2006ರ ಮೊದಲು ಜಾರಿಯಲ್ಲಿದ್ದ ಪಿಂಚಣಿಗೆ ಒಳಪಡಿಸಲು ಸರ್ಕಾರ ಆದೇಶಿಸಿದ್ದರೂ, ಮಾರ್ಗಸೂಚಿ ಹೊರಡಿಸದ ಕಾರಣ ಸಮಸ್ಯೆಯಾಗಿತ್ತು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ