ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಕ್ಕೆ ಯತ್ನಿಸಿದ ರೆಹನಾ ಫಾತಿಮಾಗೆ ಇಸ್ಲಾಂ ಧರ್ಮದಿಂದ ಬಹಿಷ್ಕಾರ
ಸೋಮವಾರ, 22 ಅಕ್ಟೋಬರ್ 2018 (06:53 IST)
ಕೇರಳ : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಕ್ಕೆ ಯತ್ನಿಸಿದ ನಟಿ ರೆಹನಾ ಫಾತಿಮಾ ಅವರಿಗೆ ಇದೀಗ ತಕ್ಕ ಶಾಸ್ತಿಯಾಗಿದೆ.
ಹೌದು. ಶುಕ್ರವಾರ ಅಯ್ಯಪ್ಪ ಸ್ವಾಮಿ ಶಬರಿಮಲೆ ಭಕ್ತರ ವಿರೋಧ ನಡುವೆಯೂ ಅನ್ಯಧರ್ಮೀಯ ರೆಹನಾ ಫಾತಿಮಾ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಪೊಲೀಸರ ಬಿಗಿ-ಭದ್ರತೆಯೊಂದಿಗೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ತೆರಳಲು ಪ್ರಯತ್ನಿಸಿದರು. ಇದಕ್ಕೆ ಸಂಬಂಧಪಟ್ಟ ಫೋಟೋವನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.
ಆದರೆ ಇದು ಕೇರಳ ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಖುದ್ದು ಕೇರಳ ಮುಸ್ಲಿ ಜಮಾ-ಅಥ್ ಕೌನ್ಸಿಲ್ ರೆಹನಾ ವಿರುದ್ಧ ಕ್ರಮಕೈಗೊಳ್ಳುವ ತೀರ್ಮಾನ ಮಾಡಿದ್ದು, ಈ ಮೂಲಕ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಪ್ರವೇಶಕ್ಕೆ ವಿರೋಧವಿದ್ದರೂ, ದೇವಾಲಯದ ಪ್ರವೇಶಕ್ಕೆ ಯತ್ನಿಸಿ ಹಿಂದೂ ಧರ್ಮದ ನಂಬಿಕೆಗಳಿಗೆ ಧಕ್ಕೆ ತರಲು ಯತ್ನಸಿದ ರೆಹನಾ ಫಾತಿಮಾ ಹಾಗೂ ಆಕೆಯ ಕುಟುಂಬ ಸದಸ್ಯರನ್ನು ಇಸ್ಲಾಂ ಧರ್ಮದಿಂದ ಹೊರಹಾಕಲಾಗಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.