ಬೆಂಗಳೂರು : ಕಳೆದ ಎರಡು ವರ್ಷದಿಂದ ಕೊರೊನಾದಿಂದಾಗಿ ಅದ್ಧೂರಿ ಗಣೇಶೋತ್ಸವಕ್ಕೆ ಅಡ್ಡಿಯಾಗಿತ್ತು. ಕೊನೆಗೂ ವಿಘ್ನೇಷನಿಗಿದ್ದ ವಾರ್ಡ್ಗೊಂದೇ ಗಣೇಶ ಎಂಬ ವಿಘ್ನ ಮುಕ್ತಾಯವಾಗಿದೆ.
ಹೌದು, ವಾರ್ಡ್ಗೊಂದೇ ಗಣೇಶ ಎಂಬ ನಿಯಮ ತೆಗೆದು ಅದ್ಧೂರಿ ಗಣೇಶೋತ್ಸವ ಆಚರಿಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದೆ. ಈ ಸಂಬಂಧ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ವಾರ್ಡ್ಗೆ ಒಂದು ಗಣೇಶ ಕೂರಿಸುವ ರೂಲ್ಸ್ ಇಲ್ಲ.
ಎರಡು ವರ್ಷದ ಹಿಂದೆ ಹೇಗೆ ನಡೀತಾ ಇತ್ತು. ಹಾಗೆ ಗಣೇಶೋತ್ಸವ ನಡೆಯುತ್ತೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್ಗೂ ಸೂಚಿಸುತ್ತೇವೆ ಅಂತ ಹೇಳಿದ್ದಾರೆ.
ಈ ಹಿಂದೆ ವಾರ್ಡ್ಗೊಂದೇ ಗಣೇಶ ಎಂದು ನಿಯಮ ಮುಂದುವರಿಸಲು ಚಿಂತನೆ ನಡೆಸುತ್ತಿದ್ದೇವೆ ಅಂತ ಬಿಬಿಎಂಪಿ ಕಮೀಷನರ್ ಹೇಳಿದ್ರು. ಈ ಬೆನ್ನಲ್ಲೇ ಸಾರ್ವಜನಿಕವಾಗಿ ಹಾಗೂ, ಗಣೇಶೋತ್ಸವ ಸಮಿತಿ ಮತ್ತು ಶ್ರೀರಾಮಸೇನೆ ಬೇಸರ ವ್ಯಕ್ತಪಡಿಸಿತ್ತು. ಇದೀಗ ಸಚಿವ ಅಶೋಕ್ ವಾರ್ಡ್ಗೆ ಒಂದು ಗಣೇಶ ಕೂರಿಸುವ ರೂಲ್ಸ್ ಇಲ್ಲ ಎಂದಿದ್ದಾರೆ.