ನವದೆಹಲಿ(ಆ.02): ವಾರ್ಷಿಕ 5 ಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಸಿ ಜಿಎಸ್ಟಿ ತೆರಿಗೆ ಕಟ್ಟುವ ಉದ್ಯಮಿಗಳು ಇನ್ನು ಮುಂದೆ, ಲೆಕ್ಕ ಪರಿಶೋಧಕರಿಂದ (ಚಾರ್ಟೆಡ್ ಅಕೌಂಟೆಂಟ್) ಕಡ್ಡಾಯ ಲೆಕ್ಕ ಪರಿಶೋಧನೆ ವರದಿ ಸಲ್ಲಿಸುವ ಬದಲು ಸ್ವಯಂ ಪ್ರಮಾಣಪತ್ರ ಒದಗಿಸಿದರೆ ಸಾಕು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಪ್ರಕಟಿಸಿದೆ.