ಶಾಕಿಂಗ್ ನ್ಯೂಸ್! ವ್ಯಕ್ತಿಯ ದೇಹದಲ್ಲಿ ಒಂದೂವರೆ ವರ್ಷ ಅಡಗಿತ್ತು ಸೋಂಕು

ಶುಕ್ರವಾರ, 22 ಏಪ್ರಿಲ್ 2022 (14:26 IST)
ಲಂಡನ್ : ಇಂಗ್ಲೆಂಡ್ನ ರೋಗಿಯೊಬ್ಬರ ದೇಹದಲ್ಲಿ ಬರೋಬ್ಬರಿ ಒಂದೂವರೆ ವರ್ಷ (505 ದಿನ) ಕೊರೊನಾ ಸೋಂಕು ಇದ್ದ ಬಗ್ಗೆ ಅಧ್ಯಯನವೊಂದು ದೃಢಪಡಿಸಿದೆ.

ಇದು ದೀರ್ಘಾವಧಿಯ ಕೊರೊನಾ ಸೋಂಕು ಎಂದು ಖಚಿತವಾಗಿ ತಿಳಿಯಲು ಯಾವುದೇ ಮಾರ್ಗವಿಲ್ಲ. ಏಕೆಂದರೆ ಪ್ರತಿಯೊಬ್ಬರೂ ಪರೀಕ್ಷೆಗೆ ಒಳಗಾಗುವುದಿಲ್ಲ ಅಧ್ಯಯನ ತಿಳಿಸಿದೆ. 

ಬರೋಬ್ಬರಿ 505 ದಿನ, ಇದು ನಿಸ್ಸಂಶಯವಾಗಿ ವರದಿಯಾದ ಅತಿ ದೀರ್ಘಾವಧಿಯ ಸೋಂಕು ಎಂದು ತೋರುತ್ತದೆಂದು ಗೈಸ್ ಮತ್ತು ಸೇಂಟ್ ಥಾಮಸ್ ಎನ್ಹೆಚ್ಎಸ್ ಫೌಂಡೇಶನ್ ಟ್ರಸ್ಟ್ನ ಸಾಂಕ್ರಾಮಿಕ ರೋಗ ತಜ್ಞ ಡಾ. ಲ್ಯೂಕ್ ಬ್ಲಾಗ್ಡನ್ ಸ್ನೆಲ್ ತಿಳಿಸಿದ್ದಾರೆ.

ದೀರ್ಘಾವಧಿ ಇರುವ ಸೋಂಕು ಯಾವ ರೂಪಾಂತರಿ ಆಗಿರಲಿದೆ ಎಂಬ ಬಗ್ಗೆ ಅಧ್ಯಯನ ನಡೆಸಲಾಯಿತು. ಕನಿಷ್ಠ 8 ವಾರಗಳವರೆಗೆ ವೈರಸ್ಗೆ ಪಾಸಿಟಿವ್ ಇರುವ ರೋಗಿಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು.

ಎಲ್ಲರೂ ಅಂಗಾಂಗ ಕಸಿ, ಎಚ್ಐವಿ, ಕ್ಯಾನ್ಸರ್ ಅಥವಾ ಇತರ ಕಾಯಿಲೆಗಳಿಗೆ ಚಿಕಿತ್ಸೆ ಪಡೆದಿದ್ದರಿಂದ ದುರ್ಬಲಗೊಂಡು ರೋಗನಿರೋಧಕ ಶಕ್ತಿ ಕ್ಷೀಣಿಸಿತ್ತು. ಗೌಪ್ಯತೆ ಕಾರಣಕ್ಕಾಗಿ ಅಧ್ಯಯನಕ್ಕೆ ಒಳಪಡಿಸಿದವರ ಮಾಹಿತಿ ಬಹಿರಂಗಪಡಿಸಿಲ್ಲ. 

ಪುನರಾವರ್ತಿತ ಪರೀಕ್ಷೆಗಳು ಅವರಲ್ಲಿ ಸೋಂಕು ಸರಾಸರಿ 73 ದಿನಗಳವರೆಗೆ ಇರುವುದನ್ನು ತೋರಿಸಿದೆ. ಇಬ್ಬರ ದೇಹದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ವೈರಸ್ ಇತ್ತು.

ಈ ಹಿಂದೆ, ಆರ್ಟಿ-ಪಿಸಿಆರ್ ಪರೀಕ್ಷೆಯೊಂದಿಗೆ ದೃಢೀಕರಿಸಲ್ಪಟ್ಟ ದೀರ್ಘಾವಧಿಯ ಕೋವಿಡ್ ಪ್ರಕರಣವು 335 ದಿನಗಳವರೆಗೆ ಸೋಂಕು ಸಕ್ರಿಯವಾಗಿತ್ತು ಎಂದು ಸಂಶೋಧಕರು ಹೇಳಿದ್ದಾರೆ.

ನಿರಂತರವಾದ ಕೋವಿಡ್, ಅಪರೂಪದ ಮತ್ತು ದೀರ್ಘಾವಧಿಯ ಕೋವಿಡ್ಗಿಂತ ಭಿನ್ನವಾಗಿದೆ.
ದೀರ್ಘಾವಧಿ ಕೋವಿಡ್ನಲ್ಲಿ, ನಿಮ್ಮ ದೇಹದಿಂದ ವೈರಸ್ ಮುಕ್ತವಾದರೂ ರೋಗಲಕ್ಷಣಗಳು ಮುಂದುವರಿಯುತ್ತವೆ ಎಂದು ಸ್ನೆಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ