ಮುಳುಗಿದ ಚೀನಾ ಹಡಗು! ಸಹಾಯಕ್ಕೆ ನಿಂತ ಭಾರತೀಯ ನೌಕಾಪಡೆ

ಶುಕ್ರವಾರ, 19 ಮೇ 2023 (08:20 IST)
ನವದೆಹಲಿ : ಹಿಂದೂ ಮಹಾಸಾಗರದ ಮಧ್ಯ ಪ್ರದೇಶದಲ್ಲಿ ಮುಳುಗಿದ ಚೀನಾದ ಮೀನುಗಾರಿಕಾ ಹಡಗಿನ ಶೋಧ ಕಾರ್ಯಕ್ಕೆ ಭಾರತೀಯ ನೌಕಾಪಡೆ ನೆರವು ನೀಡಿದೆ.

ಹಡಗಿನಲ್ಲಿ 17 ಚೀನೀ ಸಿಬ್ಬಂದಿ, 17 ಇಂಡೋನೇಷಿಯನ್ನರು ಮತ್ತು ಐದು ಫಿಲಿಪೈನ್ಸ್ ನಾಗರಿಕರು ಸೇರಿದಂತೆ 39 ಜನರು ಇದ್ದರು ಎಂದು ವರದಿಯಾಗಿದೆ.

ಮಂಗಳವಾರದಿಂದ ಹಡಗಿನ ರಕ್ಷಣಾ ಕಾರ್ಯಾಚರಣೆಗಾಗಿ ಚೀನಾ-ಭಾರತ ಸೇರಿದಂತೆ ಹಲವಾರು ದೇಶಗಳ ಸಹಾಯವನ್ನು ಕೋರಿತ್ತು. ಚೀನಾದ ನೌಕಾಪಡೆಯ ಮನವಿಗೆ ಭಾರತೀಯ ನೌಕಾಪಡೆ ಸ್ಪಂದಿಸಿದ್ದು, ಬುಧವಾರದಿಂದ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದೆ. 

ಸೇನೆಯ ವಿಮಾನವು ಪ್ರತಿಕೂಲ ಹವಾಮಾನದ ಹೊರತಾಗಿಯೂ ವ್ಯಾಪಕ ಹುಡುಕಾಟದಲ್ಲಿ ತೊಡಗಿದೆ. ಮುಳುಗಿದ ಹಡಗಿಗೆ ಸೇರಿದ ಬಹು ವಸ್ತುಗಳನ್ನು ಪತ್ತೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ