1991 ಬ್ಯಾಚಿನಲ್ಲಿ ಉತ್ತೀರ್ಣರಾದ ನಗ್ಮಾ ಅವರು ಐ ಎಫ್ ಎಸ್ ಅಧಿಕಾರಿಯಾಗಿ ಆಯ್ಕೆಯಾದ ಮೊದಲ ಮಹಿಳಾ ಅಧಿಕಾರಿ ಎಂಬ ಕೀರ್ತಿಗೆ ಪಾತ್ರರಾದವರು.
ನಗ್ಮಾ ಅವರ ಸಾಧನೆ ಕುರಿತು ಕನ್ನಡಿಗರು ಹೆಮ್ಮೆ ಪಡಬೇಕಾದ ವಿಚಾರ ಮತ್ತೊಂದಿದೆ. ಈಕೆ ಕನ್ನಡದ ಖ್ಯಾತ ಮಹಿಳಾ ಸಾಹಿತಿ ಸಾರಾ ಅಬೂಬಕರ್ ಅವರ ಸಹೋದರನ ಮಗಳು. ಅವರು ಪೊಲೆಂಡ್ ದೇಶದ ಭಾರತೀಯ ರಾಯಭಾರಿಯಾಗಿ ಆಯ್ಕೆಯಾಗಿರುವುದರಿಂದ ಮಂಗಳೂರು ಮತ್ತು ಕಾಸರಗೋಡಿನಲ್ಲಿ ನೆಲೆಸಿರುವ ಅವರ ಸಂಬಂಧಿಕರು ಸಂತಸಗೊಂಡಿದ್ದಾರೆ.
ಈ ಹಿಂದೆ ನಗ್ಮಾ ಅವರು ವಿದೇಶಾಂಗ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೊಹಮದ್ ಹಬೀಬುಲ್ಲ ಮತ್ತು ಜುಲು ಅವರ ಪುತ್ರಿಯಾಗಿರುವ ನಗ್ಮಾ ಆವರು ಕಾಸರಗೋಡು ಮೂಲದವರಾದರೂ ಓದಿದ್ದು ಬೆಳೆದಿದ್ದು ಎಲ್ಲಾ ನವದೆಹಲಿಯಲ್ಲಿ. ಅವರು ಇಂಗ್ಲಿಶ್ ಸಾಹಿತ್ಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ