ಉಚಿತ ಊಟ ನೀಡಲು ಮುಂದಾದ ಸರ್ಕಾರ

ಬುಧವಾರ, 30 ಮಾರ್ಚ್ 2022 (15:06 IST)
ಲಕ್ನೋ : ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್, ಉತ್ತರ ಪ್ರದೇಶದಲ್ಲಿ ಉಚಿತ ಪಡಿತರ ನಂತರ, ಉಚಿತ ಊಟ ನೀಡಲು ಸರ್ಕಾರ ಸಿದ್ಧತೆ ಮಾಡಲಾಗುತ್ತಿದೆ.

ಯೋಗಿ ಆದಿತ್ಯನಾಥ್ ಮೊದಲ ಸಂಪುಟ ಸಭೆಯಲ್ಲಿ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಿದ್ದರು. ಇದೀಗ ಬಡವರು ಮತ್ತು ವಂಚಿತರಿಗೆ ಉಚಿತ ಅಥವಾ ಹೆಚ್ಚಿನ ಸಬ್ಸಿಡಿಯೊಂದಿಗೆ ಊಟ ನೀಡುವ ಸಲುವಾಗಿ ರಾಜ್ಯಾದ್ಯಂತ ಸಮುದಾಯ ಅಡುಗೆಮನೆಗಳನ್ನು ಸ್ಥಾಪಿಸುವ ಯೋಜನೆ ಹೋದಿದ್ದಾರೆ.

ಉತ್ತರ ಪ್ರದೇಶ ಸರ್ಕಾರ 2020ರಿಂದ ಪ್ರತಿ ತಿಂಗಳು 15 ಕೋಟಿ ಫಲಾನುಭವಿಗಳಿಗೆ ಉಚಿತ ಪಡಿತರವನ್ನು ವಿತರಿಸುತ್ತಿದೆ. ಈ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ 1 ಕೆಜಿ ಸಂಪೂರ್ಣ ಚನಾ, 1 ಲೀಟರ್ ಅಡಿಗೆ ಎಣ್ಣೆ, 1 ಕೆಜಿ ಉಪ್ಪು ಜೊತೆಗೆ 5 ಕೆಜಿ ಗೋಧಿ ಮತ್ತು ಅಕ್ಕಿಯನ್ನು ಒಳಗೊಂಡ ಪ್ಯಾಕ್ ನೀಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ