ನವದೆಹಲಿ : ವಿಶ್ವ ಆರೋಗ್ಯ ಸಂಸ್ಥೆ ವಿಶ್ವದ ಕೋವಿಡ್ ಸಾವಿನ ವರದಿ ನೀಡಲು ಸಜ್ಜಾಗಿದೆ. ಈ ವರದಿಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಇದರ ಬೆನ್ನಲ್ಲೇ ಭಾರತ ಕೋವಿಡ್ ಸಾವಿನ ಅಂದಾಡು ವರದಿ ತಯಾರಿಸುವ ವಿಧಾನವನ್ನು ತಪ್ಪಾಗಿ ಆರ್ಥೈಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಡೇಟಾ ಅನಾಲಿಸ್ಟ್ ಮೆಕ್ ಫೀಲಿ ಹೇಳಿದ್ದಾರೆ. ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ನಾಂದಿ ಹಾಡಿದೆ.
ಕೊರೋನಾವೈರಸ್ ಆಕ್ರಮಣಕ್ಕೆ ಜೀವ ಕಳೆದುಕೊಂಡವರ ಸಂಖ್ಯೆ ಇದೀಗ ಭಾರತ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ನಡುವಿನ ಗುದ್ದಾಟಕ್ಕೆ ಕಾರಣವಾಗಿದೆ. ಹಲವು ದೇಶದಲ್ಲಿ ಕೋವಿಡ್ ಸಾವನ್ನು ನೋಂದಾಯಿಸುವಲ್ಲಿ ತಪ್ಪಾಗಿದೆ. ಹೀಗಾಗಿ ಅಧಿಕೃತ ದಾಖಲೆಗಿಂತ ಮೃತಪಟ್ಟವರ ಸಂಖ್ಯೆ ಹೆಚ್ಚಿದೆ ಎಂದು ಮೆಕ್ ಫೀಲಿ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ 194 ಸದಸ್ಯ ರಾಷ್ಟ್ರಗಳ ಪೈಕಿ ಕೋವಿಡ್ ಸಾವಿನ ವರದಿ ಆಕ್ಷೇಪಣೆ ಸಲ್ಲಿಸಿದ ಏಕೈಕ ರಾಷ್ಟ್ರ ಭಾರತವಾಗಿದೆ. ಭಾರತದ ಆಕ್ಷೇಪಣೆಗೆ ಟಿಪ್ಪಣಿ ಸಹಿತ ವಿವರಣೆ ನೀಡಿ ವರದಿ ಬಹಿರಂಗಗೊಳಿಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಮೇ ತಿಂಗಳ ಆರಂಭದ ವಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ ಸಾವಿನ ವರದಿ ಬಿಡುಗಡೆಯಾಗಲಿದೆ. ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ 40 ಲಕ್ಷ ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ ಎಂದಿದೆ. ಭಾರತ ತನ್ನವರದಿಯಲ್ಲಿ ಕೋವಿಡ್ನಿಂದ 4.8 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದಿದೆ.