ವಿಶ್ವಾದ್ಯಂತ ಇರುವ ಹುಲಿಗಳ ಸಂಖ್ಯೆ ಕೇವಲ 3900..!

ಗುರುವಾರ, 29 ಜುಲೈ 2021 (10:13 IST)
ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ. ಇದು ಗಂಭೀರವಾದ ಮತ್ತು ಭವ್ಯವಾದ ಪ್ರಾಣಿ, ಪರಿಸರ ವ್ಯವಸ್ಥೆಯ ಆರೋಗ್ಯ ಮತ್ತು ವೈವಿಧ್ಯತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಅಗ್ರ ಪರಭಕ್ಷಕ ಮತ್ತು ಆಹಾರ ಸರಪಳಿಯ ತುದಿಯಲ್ಲಿರುತ್ತದೆ. ಕಾಡಿನ ಸಸ್ತನಿ ಪ್ರಾಣಿಗಳ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಹುಲಿಗಳು ಕೊಡುಗೆ ನೀಡುತ್ತವೆ, ಏಕೆಂದರೆ ಬೇಟೆಯಾಡುವ ಸಸ್ಯಹಾರಿಗಳ ಸಮತೋಲನ ಮತ್ತು ಅವು ಆಹಾರ ನೀಡುವ ಸಸ್ಯವರ್ಗವನ್ನು ಕಾಪಾಡಿಕೊಳ್ಳುತ್ತವೆ.

ಮರಗಳನ್ನು ಕಡಿಯುವುದರಿಂದ ಆವಾಸಸ್ಥಾನಗಳ ನಷ್ಟ, ಬೇಟೆ ಮತ್ತು ಹುಲಿಯ ದೇಹದ ಭಾಗಗಳ ಅಕ್ರಮ ವ್ಯಾಪಾರ - ಇವುಗಳು ಹುಲಿಗಳ ಜನಸಂಖ್ಯೆಯ ಕುಸಿತದ ಹಿಂದಿನ ಕೆಲವು ಪ್ರಮುಖ ಅಂಶಗಳಾಗಿದೆ. ದುರದೃಷ್ಟವಶಾತ್, ಅಳಿವಿನ ಸಮೀಪದಲ್ಲಿರುವ ಪ್ರಾಣಿಗಳ ಪ್ರಭೇದಗಳಲ್ಲಿ ಹುಲಿಗಳೂ ಒಂದು. ಆದ್ದರಿಂದ, ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು, ಅಂತಾರಾಷ್ಟ್ರೀಯ ಹುಲಿ ದಿನ ಅಥವಾ ಜಾಗತಿಕ ಹುಲಿ ದಿನವನ್ನು ಪ್ರತಿವರ್ಷ ಜುಲೈ 29 ರಂದು ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಹುಲಿ ದಿನ: ಇತಿಹಾಸ
ಜುಲೈ 29 ರ ದಿನಾಂಕವು ಐತಿಹಾಸಿಕವಾದುದು. ಏಕೆಂದರೆ ಈ ದಿನದಂದು ಹಲವಾರು ದೇಶಗಳು 2010 ರಲ್ಲಿ ರಷ್ಯಾದಲ್ಲಿ ನಡೆದ ಸೇಂಟ್ ಪೀಟರ್ಸ್ಬರ್ಗ್ ಟೈಗರ್ ಶೃಂಗಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು. ಜಾಗತಿಕವಾಗಿ ಕಡಿಮೆಯಾಗುತ್ತಿರುವ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹುಲಿಗಳ ನೈಸರ್ಗಿಕ ಆವಾಸಸ್ಥಾನವನ್ನು ಕಾಪಾಡುವುದು ಈ ಒಪ್ಪಂದದ ಪ್ರಮುಖ ಅಂಶ. ಅಲ್ಲದೆ, 2022ರ ಅಂತ್ಯದ ವೇಳೆಗೆ ಹುಲಿ ಜನಸಂಖ್ಯೆಯ ದೇಶಗಳು ಹುಲಿ ಜನಸಂಖ್ಯೆಯನ್ನು ದ್ವಿಗುಣವಾಗುವಂತೆ ಮಾಡುತ್ತೇವೆ ಎಂದೂ ವಿವಿಧ ದೇಶಗಳ ಪ್ರತಿನಿಧಿಗಳು ಘೋಷಿಸಿದರು.
ಇಂಟರ್ನ್ಯಾಷನಲ್ ಟೈಗರ್ ಡೇ (ಅಂತಾರಾಷ್ಟ್ರೀಯ ಹುಲಿ ದಿನ) 2021: ಥೀಮ್
"ಅವರ ಉಳಿವು ನಮ್ಮ ಕೈಯಲ್ಲಿದೆ" ಎನ್ನುವುದು ಈ ವರ್ಷದ ಅಂತಾರಾಷ್ಟ್ರೀಯ ಹುಲಿ ದಿನದ ಥೀಮ್ ಆಗಿದೆ. ಇನ್ನು, ಕೋವಿಡ್ - 19 ಸಾಂಕ್ರಾಮಿಕದಿಂದಾಗಿ ಕಳೆದ ವರ್ಷ ಆಚರಣೆಯನ್ನು ಆನ್ಲೈನ್ನಲ್ಲಿ ನಡೆಸಲಾಯಿತು. ಆದರೂ, ಈ ಮಹತ್ವದ ದಿನವನ್ನು ವಿಶ್ವಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಯಿತು. ಜಾಗತಿಕ ಹುಲಿ ಜನಸಂಖ್ಯೆಯಲ್ಲಿ ಭಾರತವು ಸುಮಾರು 70% ರಷ್ಟನ್ನು ಹೊಂದಿರುವುದರಿಂದ, ವಾರ್ಷಿಕ ಆಚರಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಹುಲಿ ನಿಕ್ಷೇಪಗಳು ಅಥವಾ ಟೈಗರ್ ರಿಸರ್ವ್ಸ್ ಜಾರಿಯಲ್ಲಿರುವುದರಿಂದ ಮತ್ತು ಪರಿಸರ ಇಲಾಖೆಯ ಪ್ರಯತ್ನಗಳು ಪ್ರವರ್ಧಮಾನಕ್ಕೆ ಬರುತ್ತಿರುವುದರಿಂದ, ಭಾರತವು 2022ರ ಗುರಿಗಿಂತ ಮೊದಲೇ ಈಗಾಗಲೇ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ.
ಅಂತಾರಾಷ್ಟ್ರೀಯ ಹುಲಿ ದಿನ 2021: ಮಹತ್ವವಿಶ್ವ ಹುಲಿ ದಿನವನ್ನು ಆಚರಿಸುವುದು ಮಹತ್ವದ್ದಾಗಿದೆ. ಏಕೆಂದರೆ ವಿಶ್ವ ವನ್ಯಜೀವಿ ನಿಧಿ (ಡಬ್ಲ್ಯುಡಬ್ಲ್ಯುಎಫ್) ಪ್ರಕಾರ, ಜಾಗತಿಕವಾಗಿ ಹುಲಿಗಳ ಜನಸಂಖ್ಯೆ ಕೇವಲ 3900.
ಬಿಳಿ ಹುಲಿ, ಕಪ್ಪು ಪಟ್ಟೆಗಳೊಂದಿಗೆ ಕಂದು ಹುಲಿ, ಕಪ್ಪು ಪಟ್ಟೆಗಳೊಂದಿಗೆ ಬಿಳಿ ಹುಲಿ, ಮತ್ತು ಚಿನ್ನದ ಬಣ್ಣದ ಅಥವಾ ಗೋಲ್ಡನ್ ಹುಲಿ - ಹೀಗೆ ನಾನಾ ಬಣ್ಣಗಳ ಹುಲಿಗಳಿವೆ. ಈ ಹುಲಿಗಳು ತನ್ನ ಗಾಂಭೀರ್ಯದಿಂದ ನಡೆಯುವುದನ್ನು ನೋಡುವುದೇ ಒಂದು ಸುಂದರ ದೃಶ್ಯವಾಗಿದೆ. ಇಲ್ಲಿಯವರೆಗೆ, ಬಾಲಿ ಟೈಗರ್, ಕ್ಯಾಸ್ಪಿಯನ್ ಟೈಗರ್, ಜವಾನ್ ಟೈಗರ್, ಮತ್ತು ಟೈಗರ್ ಹೈಬ್ರಿಡ್ಸ್ ಸೇರಿದಂತೆ ನಾಲ್ಕು ಜಾತಿಯ ಹುಲಿಗಳ ಜನಸಂಖ್ಯೆ ನಾಶವಾಗಿದೆ ಅಥವಾ ಅಳಿದುಹೋಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ