ತೆಲಂಗಾಣದ ಟಿಆರ್ ಎಸ್ ಪಕ್ಷವನ್ನು ಪ್ರಧಾನಿ ಮೋದಿ ಹೊಗಳಿದುದರ ಹಿಂದಿದೆಯಾ ಭಾರೀ ಲೆಕ್ಕಾಚಾರ?

ಭಾನುವಾರ, 22 ಜುಲೈ 2018 (09:36 IST)
ನವದೆಹಲಿ: ಅವಿಶ್ವಾಸ ಮಂಡಳಿ ಬಗೆಗಿನ ಚರ್ಚೆಯ ಸಂದರ್ಭದಲ್ಲಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಯನ್ನು ದೂರಿ, ತೆಲಂಗಾಣದ ಟಿಆರ್ ಎಸ್ ನ್ನು ಪ್ರಧಾನಿ ಮೋದಿ ಹೊಗಳಿ ದೊಡ್ಡ ರಾಜಕೀಯ ದಾಳ ಉರುಳಿಸಿದರೇ?

ಟಿಡಿಪಿಯ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ಸಿಗದ ಹಿನ್ನಲೆಯಲ್ಲಿ ಈಗ ಎನ್ ಡಿಎ ಜತೆಗೆ ಮುನಿಸಿಕೊಂಡಿದ್ದಾರೆ.  ಹೀಗಾಗಿ ಅವರ ನೇತೃತ್ವದ ಟಿಡಿಪಿಯ ಎದುರಾಳಿ ತೆಲಂಗಾಣದ ಟಿಆರ್ ಎಸ್ ಪಕ್ಷವನ್ನು ಹೊಗಳುವ ಮೂಲಕ ಮೋದಿ ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಟಿಡಿಪಿಗೆ ಸಿಗಬಹುದಾಗಿದ್ದ ದೊಡ್ಡ ಬೆಂಬಲವನ್ನು ಮುರಿಯಲು ಯತ್ನಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಅತ್ತ ಟಿಡಿಪಿ ಕಾಂಗ್ರೆಸ್ ಜತೆಗೂ ಮೈತ್ರಿ ಮಾಡಿಕೊಳ್ಳಲು ಪೂರ್ಣ ಮನಸ್ಸು ಹೊಂದಿಲ್ಲ. ಕಾಂಗ್ರೆಸ್ಸೇತರ ಜಾತ್ಯಾತೀತ ಪಕ್ಷಗಳ ಬೆಂಬಲ ಕೋರುತ್ತಿದೆ. ಹೀಗಿರುವಾಗ ತೆಲಂಗಾಣದ ಪ್ರಾದೇಶಕ ಪಕ್ಷ, ಸಿಎಂ ಚಂದ್ರಶೇಖರ್ ರಾವ್ ಅವರ ನೇತೃತ್ವದ ಟಿಆರ್ ಎಸ್ ಬಲ ಸಿಗದಂತೆ ಮಾಡಲು ಸಂಸತ್ತಿನಲ್ಲಿ ಪ್ರಧಾನಿ ಮೋದಿ ಟಿಆರ್ ಎಸ್ ನ್ನು ಹೊಗಳುವ ಕೆಲಸ ಮಾಡಿದರೇ ಎಂಬ ಚರ್ಚೆಗಳು ಇದೀಗ ರಾಜಕೀಯ ವಲಯದಲ್ಲಿ ಓಡಾಡುತ್ತಿದೆ. ಕರ್ನಾಟಕದಲ್ಲೂ ಹಿಂದೆ ಜೆಡಿಎಸ್ ನ ದೇವೇಗೌಡರನ್ನು ಹೊಗಳಿ ಮೋದಿ ಇದೇ ತಂತ್ರಗಾರಿಕೆ ಮಾಡಿದ್ದರು. ಆದರೆ ಇಲ್ಲಿ ಸಖ್ಯ ಸಾಧ್ಯವಾಗದಿದ್ದರೂ ದೇವೇಗೌಡರು ಮೋದಿ ಬಗ್ಗೆ ಮೃದು ಧೋರಣೆ ತಾಳುವಂತೆ ಮಾಡಲು ಯಶಸ್ವಿಯಾಗಿದ್ದರು. ಈಗ ಆಂಧ್ರದಲ್ಲೂ ಅದೇ ತಂತ್ರಗಾರಿಕೆಗೆ ಮೋದಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ