ಉಕ್ರೇನ್ ವಾಯುಮಾರ್ಗ ಬಂದ್ !

ಗುರುವಾರ, 24 ಫೆಬ್ರವರಿ 2022 (14:43 IST)
ಹೊಸದಿಲ್ಲಿ : ಉಕ್ರೇನ್ ಮೇಲೆ ರಷ್ಯಾ ಅಧಿಕೃತವಾಗಿ ಯುದ್ಧ ಘೋಷಣೆ ಮಾಡಿದೆ.
 
ಪಾಶ್ಚಿಮಾತ್ಯ ದೇಶಗಳ ಒತ್ತಡದ ನಡುವೆಯೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಗುರುವಾರ 'ಸೇನಾ ಕಾರ್ಯಾಚರಣೆ' ನಡೆಸಲು ಆದೇಶ ಮಾಡಿದ್ದಾರೆ.

ಉಕ್ರೇನ್ ಸೇನೆಗೆ ಶರಣಾಗುವಂತೆ ಅವರು ಆಗ್ರಹಿಸಿದ್ದಾರೆ. ಈ ಹಿನ್ನೆಲೆ ಉಕ್ರೇನ್ ನ ಹಲವು ಕಡೆ ದಾಳಿ ನಡೆಯುತ್ತಿದೆ. ಈ ಮಧ್ಯೆ ಭಾರತ ಕೂಡ ತನ್ನ ದೇಶದ ಪ್ರಜೆಗಳನ್ನು ವಾಪಸ್ ಕರೆತರುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿದೆ.

ಆದರೆ ಏಕಾಏಕಿ ಯುದ್ಧ ಘೋಷಣೆಯಾದ ಹಿನ್ನೆಲೆ ಉಕ್ರೇನ್ ಗೆ ತೆರಳಿದ್ದ ಭಾರತದ ಏರ್ ಇಂಡಿಯಾ ವಿಮಾನ ವಾಪಸ್ ಆಗಿದೆ. ಹೌದು, ಉಕ್ರೇನ್ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ಆರಂಭಿಸಿದ್ದು, ಹಲವೆಡೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಹೀಗಾಗಿ ಬೇರೆ ದೇಶದಿಂದ ಆಗಮಿಸುವ ವಿಮಾನಗಳಿಗೆ ಬರದಂತೆ ಉಕ್ರೇನ್ ಸರ್ಕಾರ ಮನವಿ ಮಾಡಿದೆ. ಈ ಸಂಬಂಧ ಏರ್ ಮ್ಯಾನ್ ಗಳಿಗೆ ವಾಯುಪ್ರದೇಶ ಬಂದ್ ಮಾಡಿರುವ ಬಗ್ಗೆ ನೋಟಿಸ್ ಜಾರಿಗೊಳಿಸಿರುವ ಉಕ್ರೇನ್, ರಷ್ಯಾ ದಾಳಿಯಿಂದಾಗಿ ಉಕ್ರೇನ್ ನ ವಾಯು ಮಾರ್ಗ ಬಳಸುವುದು ಅತ್ಯಂತ ಅಪಾಯಕಾರಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ