ಶಾಲೆಗಳಿಗೆ ರಜೆ ಘೋಷಣೆ

ಶುಕ್ರವಾರ, 14 ಜನವರಿ 2022 (17:37 IST)
ತಿರುವನಂತಪುರಂ : ಕೇರಳದಲ್ಲಿ ಕೊವಿಡ್ -19  ಪ್ರಕರಣಗಳ ಏರಿಕೆಯಿಂದಾಗಿ 1 ರಿಂದ 9 ನೇ ತರಗತಿಯ ಶಾಲೆಗಳು ಮುಂದಿನ ಆದೇಶದವರೆಗೆ ಮುಚ್ಚಲು ತೀರ್ಮಾನಿಸಲಾಗಿದೆ.
 
ಇಂದು ಜನವರಿ 14 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಜನವರಿ 21 ರಿಂದ ಪ್ರಾರಂಭವಾಗುವ ಎರಡು ವಾರಗಳವರೆಗೆ  9 ನೇ ತರಗತಿಯವರೆಗಿನ  ಆಫ್‌ಲೈನ್ ತರಗತಿಗಳನ್ನು ಸ್ಥಗಿತಗೊಳಿಸಲಾಗುತ್ತದೆ.

ಆದಾಗ್ಯೂ, 10 ರಿಂದ 12 ನೇ ತರಗತಿಗಳಿಗೆ ಆಫ್‌ಲೈನ್ ತರಗತಿಗಳು ಮುಂದುವರಿಯುವುದರಿಂದ ಈ ಮುಚ್ಚುವಿಕೆಯ ನಿಯಮಗಳು ಹಿರಿಯ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ.

10 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲು ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಸಮನ್ವಯತೆ ಮತ್ತು ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 13,468 ಹೊಸ ಕೊವಿಡ್ -19 ಪ್ರಕರಣಗಳು ಮತ್ತು ಇಪ್ಪತ್ತೊಂದು ಸಾವುಗಳು ದಾಖಲಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ