ರಾಜ್ಯಸಭೆಯಲ್ಲಿ ಕನ್ನಡ ಸೇರಿ 10 ಭಾಷಗಳಲ್ಲಿ ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಗುರುವಾರ, 19 ಜುಲೈ 2018 (09:06 IST)
ನವದೆಹಲಿ: ರಾಜ್ಯಸಭೆ ಅಧಿವೇಶನದಲ್ಲಿ ಕನ್ನಡ ಸೇರಿದಂತೆ 10 ಭಾಷೆಗಳಲ್ಲಿ ಮಾತನಾಡಿ ಸಭಾಪತಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ದಾಖಲೆ ಮಾಡಿದ್ದಾರೆ.

ಸಂಸದರಿಗೆ ತಮ್ಮ ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಅವಕಾಶ ಮಾಡಿಕೊಡಲಾಗಿದ್ದು, ಇದನ್ನು ಪ್ರೋತ್ಸಾಹಿಸಲು ಸ್ವತಃ ಸಭಾಪತಿಗಳಾಗಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಾವೇ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ವಾಕ್ಯಗಳನ್ನು ಓದಿದ್ದಾರೆ.

ಕನ್ನಡ, ಬಂಗಾಳಿ, ಗುಜರಾತಿ, ಮಲಯಾಳಂ, ಮರಾಠಿ, ನೇಪಾಳಿ, ಒರಿಯಾ, ತಮಿಳು, ಮತ್ತು ತೆಲುಗು ಭಾಷೆಗಳಲ್ಲಿ ವೆಂಕಯ್ಯನಾಯ್ಡು ಕೆಲವು ವಾಕ್ಯಗಳನ್ನು ಓದಿದರು. ಎಲ್ಲಾ ಭಾಷೆಗಳಿಗೂ ಅವಕಾಶ ಮತ್ತು ಪ್ರೋತ್ಸಾಹ ನೀಡುವ ನಿಟ್ಟಿನಿಂದ ಈ ಕ್ರಮ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ