18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಯಾವಾಗ?

ಭಾನುವಾರ, 19 ಡಿಸೆಂಬರ್ 2021 (13:26 IST)
ಈಗಾಗಲೇ ಶಾಲೆಗಳನ್ನು ತೆರೆಯಲಾಗಿದೆ. ಶಾಲೆಗಳಲ್ಲೂ ಕೋವಿಡ್ ಸೋಂಕು ಹರಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಸುರಕ್ಷೆ ಮತ್ತು ಲಸಿಕೆ ಬಗ್ಗೆ ವ್ಯಾಪಕವಾಗಿ ಚರ್ಚೆಗಳು ನಡೆಯುತ್ತಿದೆ.

ಹಲವು ದೇಶಗಳಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಅಮೆರಿಕದಲ್ಲಿ ಮೇ ತಿಂಗಳಿನಿಂದ 12 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೆ ಫೈಜರ್ ಲಸಿಕೆಯನ್ನು ನೀಡಲಾಗುತ್ತಿದ್ದು, ಮುಂದಿನ ವರ್ಷದಲ್ಲಿ 12 ವರ್ಷಕ್ಕಿಂತ ಕೆಳಗಿನವರಿಗೆ ಲಸಿಕೆ ಹಾಕುವ ತಯಾರಿ ನಡೆಯುತ್ತಿದೆ.

ಇಸ್ರೇಲ್ನಲ್ಲಿ ಮಕ್ಕಳಿಗೆ ಜೂನ್ನಿಂದ ವ್ಯಾಕ್ಸಿನ್ ನೀಡಲಾಗುತ್ತಿದೆ. ಕೆನಡಾ 2020ರ ಡಿಸೆಂಬರ್ನಲ್ಲೇ 16 ವರ್ಷದವರೆಗಿನ ಎಲ್ಲ ಮಕ್ಕಳಿಗೂ ಫೈಜರ್ ಲಸಿಕೆ ನೀಡಲು ಅನುಮೋ ನೀಡಿದೆ. ಇದಲ್ಲದೆ ಮಾಲ್ಟಾ, ಚಿಲಿಯಂತಹ ಅನೇಕ ಸಣ್ಣ ದೇಶಗಳೂ ಮಕ್ಕಳಿಗೆ ಲಸಿಕೆ ನೀಡಲು ಪ್ರಾರಂಭಿಸಿವೆ.

ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗಿ ಸಲಾಗಿದ್ದು, ಕೋವಿಶೀಲ್ಡ್ ತಯಾರಿಸುವ ಸೀರಮ್ ಸಂಸ್ಥೆಯು ಮಕ್ಕಳಿಗಾಗಿ ಪ್ರತ್ಯೇಕ ಲಸಿಕೆ ತಯಾರಿಸಲು ಸಿದ್ಧತೆ ನಡೆಸುತ್ತಿದೆ.

ಅಲ್ಲದೇ ಝೈಡಸ್ ಕ್ಯಾಡಿಲಾ ಸಂಸ್ಥೆ ತಯಾರಿಸುವ ಝೈಕೋವ್- ಡಿ ಯ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದ್ದು, ಅನುಮೋದನೆಗೆ ಕಾಯುತ್ತಿದೆ. ಆದರೆ ಮಕ್ಕಳಿಗೆ ಲಸಿಕೆ ನೀಡಲು ಸರಕಾರ ಇನ್ನೂ ಹಸಿರು ನಿಶಾನೆ ತೋರಿಸಿಲ್ಲ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ