ಮಹಿಳೆಗೆ ಜೀವನಾಂಶ ಕಡ್ಡಾಯ : ಹೈಕೋರ್ಟ್

ಶನಿವಾರ, 16 ಏಪ್ರಿಲ್ 2022 (13:10 IST)
ನವದೆಹಲಿ : ಯಾವಾಗಲಾದರೂ ಒಮ್ಮೆ ಪ್ರತ್ಯೇಕವಾಗಿ ನಡೆಸುವ ವ್ಯಭಿಚಾರವು, ವ್ಯಭಿಚಾರದ ಜೀವನವೆಂದು (ಲಿವಿಂಗ್ ಇನ್ ಅಡಲ್ಟ್ರಿ) ಪರಿಗಣನೆಯಾಗುವುದಿಲ್ಲ.
 
ಹಾಗಾಗಿ, ವಿಚ್ಛೇದನದ ಬಳಿಕವೂ ಮಹಿಳೆಯನ್ನು ಜೀವನಾಂಶದಿಂದ ದೂರವಿಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ವಿಚ್ಛೇದನದ ಬಳಿಕ ಸಿಆರ್ಪಿಸಿ (ಕ್ರಿಮಿನಲ್ ಪ್ರೊಸಿಜರ್ ಕೋಡ್) ಸೆಕ್ಷನ್ 125ರ ಅಡಿ ಪತ್ನಿಗೆ ಜೀವನಾಂಶ ನೀಡುವಂತೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸುವಂತೆ ಕೋರಿ ಪತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿದೆ. 

ನಿರಂತರವಾಗಿ ನಡೆಸುವ ವ್ಯಭಿಚಾರ ಅಥವಾ ವ್ಯಭಿಚಾರಕ್ಕಾಗಿಯೇ ಒಟ್ಟಾಗಿ ಇರುವುದಕ್ಕೆ ಕಠಿಣ ಸಿಆರ್ಪಿಸಿ ಸೆಕ್ಷನ್ 125 (4) ಅನ್ವಯಿಸುತ್ತದೆ ಎಂದು ದೇಶದ ಹಲವು ಹೈಕೋರ್ಟ್ಗಳು ಹೇಳಿವೆ ಎಂದು ನ್ಯಾಯಾಲಯ ಹೇಳಿದೆ.

ವ್ಯಭಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಹೈಕೋರ್ಟ್ಗಳು ತೀರ್ಪನ್ನು ನೀಡಿದ್ದು, ಪತ್ನಿಗೆ ಜೀವನಾಂಶ ನೀಡುವುದಕ್ಕೆ ಸಂಬಂಧಿಸಿದ ವಿಚಾರವನ್ನು ಪರಿಹರಿಸಿವೆ. ಸಿಆರ್ಪಿಸಿ ಸೆಕ್ಷನ್ 125(4) ಅನ್ನು ಅನ್ವಯಿಸಲು ಪತಿಯು ಪತ್ನಿ ಪೂರ್ಣ ವ್ಯಭಿಚಾರದಲ್ಲಿ ಭಾಗಿಯಾಗಿದ್ದಾಳೆ ಎಂಬುದನ್ನು ಪತಿಯೂ ಸಾಕ್ಷಿಯಿಂದ ಸಾಬೀತುಪಡಿಸಬೇಕು.

ಹೀಗಾಗಿ, ಯಾವಾಗಲಾದರೊಮ್ಮೆ ಏಕಾಂತದಲ್ಲಿ ನಡೆಸಿದ ವ್ಯಭಿಚಾರವು, ವ್ಯಭಿಚಾರದ ಬದುಕು ಆಗುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ