ಝೊಮ್ಯಾಟೊ ಹೊಸ ಫೀಚರ್?

ಮಂಗಳವಾರ, 22 ಮಾರ್ಚ್ 2022 (10:03 IST)
ನವದೆಹಲಿ : ಆರ್ಡರ್ ಮಾಡಿದರೆ ತಡವಾಗಿ ಫುಡ್ ಡೆಲಿವರಿ ಮಾಡ್ತಾರೆ ಅಂತ ಡೆಲಿವರಿ ಬಾಯ್ಸ್ ಮೇಲೆ ಗ್ರಾಹಕರು ಜಗಳಕ್ಕೆ ಬೀಳುವುದು, ಹಣ ಕೊಡದೇ ಸತಾಯಿಸುವಂತಹ ಹಲವಾರು ಪ್ರಕರಣಗಳನ್ನು ಗಮನಿಸಿದ್ದೇವೆ.
 
ಇಂತಹ ಸನ್ನಿವೇಶಗಳಿಗೆ ಅಂತ್ಯವಾಡಬೇಕು ಎಂಬ ದೃಷ್ಟಿಯಿಂದ ಝೊಮ್ಯಾಟೊ ಹೊಸ ಯೋಜನೆಯೊಂದನ್ನು ರೂಪಿಸಿದೆ. ಫುಡ್ ಡೆಲಿವರಿ ಆ್ಯಪ್ ಝೊಮ್ಯಾಟೊ, ಆರ್ಡರ್ ಮಾಡಿದ ಕ್ಷಣದಿಂದ ಕೇವಲ 10 ನಿಮಿಷದಲ್ಲಿ ಗ್ರಾಹಕರ ಮನೆಗೆ ಆರ್ಡರ್ ತಲುಪಿಸುವ ಹೊಸ ಫೀಚರ್ ಅನ್ನು ಪರಿಚಯಿಸುವುದಾಗಿ ಘೋಷಿಸಿದೆ. 

ಝೊಮ್ಯಾಟೊ ಸಹ ಸಂಸ್ಥಾಪಕ ದೀಪಿಂದರ್ ಗೋಯಲ್ ಹೊಸ ಫೀಚರ್ ಕುರಿತು ಟ್ಟಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಝೊಮ್ಯಾಟೊದಿಂದ ಕೇವಲ 10 ನಿಮಿಷದಲ್ಲಿ ಫುಡ್ ಡೆಲಿವರಿ ಮಾಡುವ ಯೋಜನೆ ಶೀಘ್ರವೇ ಬರಲಿದೆ. ಇದು ಮೊದಲು ಮುಂದಿನ ತಿಂಗಳು ಗುರ್ಗಾಂವ್ನಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ