ವಾಟ್ಸ್ಆ್ಯಪ್ನ ಹೊಸ ಫೀಚರ್!

ಬುಧವಾರ, 21 ಜುಲೈ 2021 (17:21 IST)
ಸಾಮಾನ್ಯವಾಗಿ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ನಿರಂತರವಾಗಿ ಹೊಸ  ಹೊಸ  ಫೀಚರ್ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದು ನಿಜಕ್ಕೂ ಗಮನಿಸಬೇಕಾದಂತಹ ಅಂಶವಾಗಿದೆ. ಪ್ರತಿಸಲದಂತೆ ಈ ಬಾರಿಯೂ ಒಂದು ವಿಶಿಷ್ಟವಾದ ಫೀಚರ್ ಒಂದನ್ನು ಸೇರಿಸಿದೆ ವಾಟ್ಸ್ಆ್ಯಪ್.

ನೀವು ಮುಂದಿನ ಬಾರಿ ನಿಮ್ಮ ವಾಟ್ಸ್ಆ್ಯಪ್ ಅಪಡೇಟ್ ಕೇಳಿದಾಗ ಅಲ್ಲಿದೆ ನೋಡಿ ಮಜಾ. ಏಕೆಂದರೆ ವಾಟ್ಸ್ಆ್ಯಪ್ನಲ್ಲಿ ಮಾಡುವ ಗ್ರೂಪ್ ವಿಡಿಯೋ ಅಥವಾ ಗ್ರೂಪ್ ವಾಯ್ಸ್ ಕಾಲ್ ನಲ್ಲಿ ನೀವು ಮೊದಲಿನಂತೆ ಎಲ್ಲರೂ ಒಂದೇ ಬಾರಿಗೆ ಕನೆಕ್ಟ್ ಆಗಿ ಮಧ್ಯ ನಿಮ್ಮ ಗ್ರೂಪ್ ವಿಡಿಯೋ ಅಥವಾ ಗ್ರೂಪ್ ವಾಯ್ಸ್ ಕಾಲ್ ಕಟ್ಟಾದರೆ ನೀವು ಅದರಲ್ಲಿ ಸೇರಲು ಅವಕಾಶವಿರಲಿಲ್ಲ. ಆದರೆ, ಈ ಸಮಸ್ಯೆ ಇನ್ನು ಮುಂದೆ ಇರುವುದಿಲ್ಲ. ಹಾಗೆ ಮಾಡಲು ಮತ್ತೆ ಎಲ್ಲರೂ ಗ್ರೂಪ್ ವಿಡಿಯೋ ಮತ್ತು ಗ್ರೂಪ್ ವಾಯ್ಸ್ ಕಾಲ್ ಶುರು ಮಾಡಬೇಕಾಗಿತ್ತು. ಆದರೆ, ಇನ್ಮುಂದೆ ನೀವು ನೆಟ್ವರ್ಕ್ ಸಮಸ್ಯೆಯಿಂದ ವಾಟ್ಸ್ಆ್ಯಪ್ ಗ್ರೂಪ್ ಕಾಲ್ನಿಂದ ಹೊರ ಬಂದರೆ, ಮತ್ತೆ ನೀವು ಅದರಲ್ಲಿ ಸೇರಿಕೊಳ್ಳಬಹುದಾಗಿದೆ. ವಿಡಿಯೋ ಮತ್ತು ವಾಯ್ಸ್ ಕಾಲ್ನಲ್ಲಿ ಗ್ರೂಪ್ನ ಸದಸ್ಯರೊಂದಿಗೆ ಸಂವಾದವನ್ನು ಮುಂದುವರೆಸಬಹುದಾಗಿದೆ.
ಕಾಲ್ ಕಟ್ಟಾದಾಗ ಮತ್ತೆ ವಾಟ್ಸ್ಆ್ಯಪ್ನಲ್ಲಿರುವ ಕಾಲ್ ಫೀಚರ್ಗೆ ಹೋಗಿ ಮತ್ತೆ ನಡೆಯುತ್ತಿರುವ ಗ್ರೂಪ್ ವಿಡಿಯೋ ಅಥವಾ ಗ್ರೂಪ್ ವಾಯ್ಸ್ ಕಾಲ್ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಇದರೊಂದಿಗೆ ಹೊಸದಾಗಿ 'ನ್ಯೂ ಕಾಲ್ ಇನ್ಫೋ ಸ್ಕ್ರೀನ್' ಒಂದನ್ನು ಸೇರಿಸಲಾಗಿದ್ದು, ಅದರಲ್ಲಿ ನೀವು ಇನ್ನೂ ಗ್ರೂಪ್ ವಿಡಿಯೋ ಮತ್ತು ಗ್ರೂಪ್ ವಾಯ್ಸ್ ಕಾಲ್ನಲ್ಲಿ ಯಾರಿದ್ದಾರೆ ಹಾಗೂ ಇನ್ನೂ ಯಾರು ಈ ಗ್ರೂಪ್ ಕಾಲ್ನಲ್ಲಿ ಸೇರಿಕೊಂಡಿಲ್ಲ ಎಂದು ಸಹ ನೀವು ಈಗ ನೋಡಬಹುದಾಗಿದೆ.
ಈ ಫೀಚರ್ನಿಂದಾಗಿ ನೀವು ನೆಟ್ವರ್ಕ್ ಸಮಸ್ಯೆಯಿಂದ ಕಾಲ್ ಕಟ್ಟಾದರೆ ನೀವು ಮತ್ತೆ ಅದರಲ್ಲಿ ಸೇರಿಕೊಳ್ಳಬಹುದಾಗಿದೆ ಎಂದು ವಾಟ್ಸ್ಆ್ಯಪ್ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದೆ.  ಮುಂಚೆ ನೀವು ಕಾಲ್ ನ ಬಗ್ಗೆ ನೋಟಿಫಿಕೇಶನ್ ನಲ್ಲಿ ನೋಡಿ ಕಾಲ್ನಲ್ಲಿರುವವರಿಗೆ ತಮ್ಮನ್ನು ಸೇರಿಸಿಕೊಳ್ಳಿ ಎಂದು ಕೇಳಿ ನಂತರ ಅವರು ಸೇರಿಸಿಕೊಂಡರೆ ಗ್ರೂಪ್ ಕಾಲ್ ಗೆ ಸೇರಬಹುದಿತ್ತು. ಆದರೆ, ಈ ಹೊಸ ಅಪಡೇಟ್ ನಿಂದಾಗಿ ನೀವು ನಿಮಷ್ಟಕ್ಕೆ ನೀವೇ ಗ್ರೂಪ್ ಕಾಲ್ ನಲ್ಲಿ ಸೇರಿಕೊಳ್ಳಬಹುದಾಗಿದೆ.
ಈ ಹೊಸ ಫೀಚರ್ ಎಲ್ಲ ಆಂಡ್ರಾಯ್ಡ್ ಮತ್ತು ಐಓಎಸ್ ಗಳಲ್ಲಿ ಅತೀ ಶೀಘ್ರದಲ್ಲಿಯೇ ಹೊಸ ಅಪಡೇಟ್ನೊಂದಿಗೆ ಬರಲಿದೆ. ಈ ಹೊಸ ಫೀಚರ್ ದಿಂದಾಗಿ ನೀವು ಗ್ರೂಪ್ ಕಾಲ್ ನಿಂದ ಯಾವಾಗಾದರೂ ಹೊರಗಡೆ ಬರಬಹುದು ಮತ್ತು ಕೆಲ ಸಮಯದ ನಂತರ ಕಾಲ್ ಇನ್ನೂ ನಡೆಯುತ್ತಿದ್ದರೆ ಮತ್ತೆ ಸೇರಿಕೊಳ್ಳಬಹುದಾಗಿದೆ. ನಿಮಗೆ ವಾಟ್ಸ್ಆ್ಯಪ್ ಗ್ರೂಪ್ ಕಾಲ್ ಬಂದಾಗ ಎರಡು ಆಯ್ಕೆಗಳು ಬರುತ್ತವೆ. 'ಜಾಯಿನ್' ಮತ್ತು 'ಇಗ್ನೋರ್'. ಜಾಯಿನ್ ಒತ್ತಿದರೆ ನಿಮ್ಮನ್ನು ನೇರವಾಗಿ ಕಾಲ್ಗೆ ಒಯ್ಯುತ್ತದೆ, ಇಗ್ನೋರ್ ಒತ್ತಿದರೆ ನಿಮಗೆ ಬಂದ ಕಾಲ್ ಹಾಗೆಯೇ ಕಾಲ್ ಟ್ಯಾಬ್ನಲ್ಲಿರುತ್ತದೆ. ನಿಮಗೆ ಬೇಕಾದಾಗ ಅದರಲ್ಲಿ ಸೇರಿಕೊಳ್ಳಬಹುದಾಗಿದೆ. ಇದೇ ಈ ಹೊಸ ಫೀಚರ್ನ ವಿಶೇಷತೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ