ಭಾರವಾದ ಹಾಗೂ ಹಗುರವಾದ ವಸ್ತುಗಳನ್ನು ಮನೆಯ ಯಾವ ದಿಕ್ಕಿನಲ್ಲಿಡಬೇಕು ಗೊತ್ತಾ?

ಮಂಗಳವಾರ, 22 ಡಿಸೆಂಬರ್ 2020 (06:42 IST)
ಬೆಂಗಳೂರು : ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸಿದರೆ ಮಾತ್ರ ಆ ಮನೆಯಲ್ಲಿ ವಾಸಿಸುವ ಕುಟುಂಬದವರಿಗೆ ಸುಖ, ಶಾಂತಿ ನೆಮ್ಮದಿ ಇರುತ್ತದೆ. ಇ್ಲಲವಾದರೆ ಹಲವಾರು ಸಮಸ್ಯೆಗಳು ಬಂದು ಕಾಡುತ್ತವೆ. ಹಾಗಾಗಿ ಮನೆಯನ್ನು ನಿರ್ಮಿಸುವಾದ ವಾಸ್ತು ನಿಯಮ ಪಾಲಿಸಿ.

ಮನೆಯನ್ನು ನಿರ್ಮಿಸುವಾಗ ಮನೆಯ ನೈರುತ್ಯ ದಿಕ್ಕಿನಲ್ಲಿ ಭಾಗವನ್ನು ಎತ್ತರದಲ್ಲಿ ನಿರ್ಮಿಸಬೇಕು. ಮನೆಯ ನೈರುತ್ಯ ದಿಕ್ಕಿನ ಭಾಗ ಎತ್ತರವಾಗಿದ್ದರೆ ಮನೆಯಲ್ಲಿ ಸಿರಿ ಸಂಪತ್ತು ನೆಲೆಸಿರುತ್ತದೆ. ಮತ್ತು ಭಾರವಾದ ಸರಕುಗಳನ್ನು ಇಡಲು ಈ ದಿಕ್ಕು ಸೂಕ್ತ. 

ಅಲ್ಲದೇ ಈಶಾನ್ಯ ದಿಕ್ಕಿನಲ್ಲಿ ಯಾವುದೇ ರೀತಿಯ ಭಾರವಾದ ವಸ್ತುಗಳನ್ನು ಇಟ್ಟುಕೊಳ‍್ಳಬೇಡಿ. ಈ ಭಾಗ ತುಂಬಾ ಹಗುರವಾಗಿರಬೇಕು. ಇದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತದೆ. ಹಾಗೇ ಇಳಿಜಾರು ಛಾವಣಿಯನ್ನು ಈಶಾನ್ಯ ದಿಕ್ಕಿನಲ್ಲಿ ಮಾತ್ರ ನಿರ್ಮಿಸಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ