ಮೊಬೈಲ್ ನಲ್ಲಿ ರೊಮ್ಯಾಂಟಿಕ್ ಫೋಟೋ ಸೇವ್ ಮಾಡ್ತೀರಾ? ಹಾಗಿದ್ದರೆ ಇದನ್ನು ಓದಿ!
ಸೋಮವಾರ, 3 ಸೆಪ್ಟಂಬರ್ 2018 (08:50 IST)
ಬೆಂಗಳೂರು: ಇದು ಸೆಲ್ಫೀ ಯುಗ. ನಮ್ಮ ಜೀವನದ ಸುಂದರ ಕ್ಷಣಗಳನ್ನು ಕ್ಯಾಮರಾಗಳಲ್ಲಿ ಸೆರೆ ಹಿಡಿದು ಸೇವ್ ಮಾಡುವುದು, ಬೇಕೆಂದಾಗ ನೋಡುವುದು ಎಲ್ಲರ ಅಭ್ಯಾಸ.
ಆದರೆ ಯಾವುದೇ ಕಾರಣಕ್ಕೂ ಮೊಬೈಲ್ ನಲ್ಲಿ ರೊಮ್ಯಾಂಟಿಕ್ ಮೂಡ್ ನಲ್ಲಿರುವಾಗ ತೆಗೆದ ಕೊಂಚ ಅಶ್ಲೀಲ ಎನಿಸುವ ಫೋಟೋಗಳನ್ನು ಸೇವ್ ಮಾಡಿಟ್ಟುಕೊಳ್ಳಬೇಡಿ. ಇದರಿಂದ ಅಪಾಯವಾಗುವ ಸಾಧ್ಯತೆಯೇ ಹೆಚ್ಚು.
ಒಂದು ವೇಳೆ ಅಕಸ್ಮಾತ್ತಾಗಿ ಮೊಬೈಲ್ ಕಳೆದುಕೊಂಡು ಯಾರದೋ ದುರುಳರ ಕೈಗೆ ಸಿಕ್ಕರೆ ನಿಮ್ಮ ರೊಮ್ಯಾಂಟಿಕ್ ಫೋಟೋಗಳು ತಪ್ಪಾಗಿ ಬಳಕೆಯಾಗುವ ಅಪಾಯವಿದೆ. ಅದೂ ಅಲ್ಲದೆ, ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಮೊಬೈಲ್ ನೋಡುವ ಖಯಾಲಿ ಇದ್ದೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಅಕಸ್ಮಾತ್ತಾಗಿ ನಿಮ್ಮ ರೊಮ್ಯಾಂಟಿಕ್ ಭಂಗಿಯ ಫೋಟೋಗಳು ಅವರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಬಹುದು. ಹೀಗಾಗಿ ಆದಷ್ಟು ಇಂತಹ ಫೋಟೋಗಳನ್ನು ಸೇವ್ ಮಾಡಬೇಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.