ಬೇಕಾಗುವ ಸಾಮಾಗ್ರಿಗಳು: ಪಪ್ಪಾಯಿ - 1 ಕೆಜಿ ಹಾಲು - 2 ಲೀಟರ್ ಸಕ್ಕರೆ - 2 ಕಪ್ ತುಪ್ಪ - 2 ಚಮಚ ದ್ರಾಕ್ಷಿ - ಸ್ವಲ್ಪ ಕೇಸರಿ - ಸ್ವಲ್ಪ ಏಲಕ್ಕಿ - ಸ್ವಲ್ಪ ಗೋಡಂಬಿ - ಹತ್ತು ಚೂರುಗಳು
ಪಾಕ ವಿಧಾನ: ಪಪ್ಪಾಯವನ್ನು ಚೆನ್ನಾಗಿ ತುರಿದು, ಮೃದುವಾಗುವವರೆಗೆ ಸ್ವಲ್ಪ ನೀರು ಹಾಕಿ ಬೇಯಿಸಿ.
ನಂತರ ಅದರ ನೀರನ್ನು ಸೋಸಿ, ಹೊಂಬಣ್ಣ ಬರುವವರೆಗೆ ತುಪ್ಪದಲ್ಲಿ ಹುರಿಯಿರಿ.
ಇದಕ್ಕೆ ಹಾಲು ಮತ್ತು ಸಕ್ಕರೆಯನ್ನು ಸೇರಿಸಿ ಮಿಶ್ರಣವು ಮಂದವಾಗುವವರೆಗೆ ಕಲಸುತ್ತಲೇ ಇರಿ.
ದ್ರಾಕ್ಷಿ ಮತ್ತು ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಇದಕ್ಕೆ ಬೆರೆಸಿ.