ಬೇಕಾಗುವ ಸಾಮಾಗ್ರಿಗಳು: ಬಟಾಟೆ - 4 ಟೊಮ್ಯಾಟೋ - 2 ತುರಿದ ತೆಂಗಿನಕಾಯಿ - 5-6 ಚಮಚ ಹಸಿಮೆಣಸಿನಕಾಯಿ - 5 ಹುರಿಗಡಲೆ - ಒಂದು ಸಣ್ಣ ಕಪ್ ಲವಂಗ - 2 ಎಣ್ಣೆ - ಸ್ವಲ್ಪ ಮೊಸರು - ಒಂದು ಸಣ್ಣ ಕಪ್ ಕರಿಬೇವು ಉಪ್ಪು - ರುಚಿಗೆ ತಕ್ಕಷ್ಟು
ಪಾಕ ವಿಧಾನ : ಬಟಾಟೆಯನ್ನು ಬೇಯಿಸಿ ಅದು ತಣ್ಣಾಗದ ಮೇಲೆ ಅದನ್ನು ಬಜ್ಜಿಮಾಡಿ. ಹುರಿಗಡಲೆ, ತೆಂಗಿನತುರಿ ಮತ್ತು ಹಸಿಮೆಣಸಿನಕಾಯಿಗಳನ್ನು ಚೆನ್ನಾಗಿ ರುಬ್ಬಿ. ಒಂದು ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿದ ಟೊಮ್ಯಾಟೋವನ್ನು 2 ನಿಮಿಷ ಬೇಯಿಸಿ ಅದಕ್ಕೆ ಬಜ್ಜಿ ಮಾಡಿದ ಬಟಾಟೆ, ಮೊಸರು ಮತ್ತು ರುಬ್ಬಿದ ಮಿಶ್ರಣವನ್ನು ಸೇರಿಸಿ ಸಣ್ಣ ಉರಿಯಲ್ಲಿ 10 ನಿಮಿಷ ಬೇಯಿಸಿ. ಕೊನೆಯಲ್ಲಿ ಇದಕ್ಕೆ ತುಪ್ಪ ಮತ್ತು ಲವಂಗದ ಒಗ್ಗರಣೆ ಕೊಡಿ. ಬಿಸಿ ಇರುವಾಗಲೇ ಬಡಿಸಿ.