ರವೆ-ಅರ್ಧ ಕೆಜಿ ಹಸಿಮೆಣಸಿನಕಾಯಿ - 8 ಈರುಳ್ಳಿ - 4 ತೆಂಗಿನಕಾಯಿ ತುರಿ - ಅರ್ಧ ಕಪ್ ಅಡಿಗೆ ಸೋಡಾ - 1 ಚಮಚ ಮೊಸರು - ಕಾಲು ಲೀಟರ್ ಕೊತ್ತಂಬರಿ ಸೊಪ್ಪು - 1 ಕಂತೆ ಉಪ್ಪು - ರುಚಿಗೆ ತಕ್ಕಷ್ಟು ತುಪ್ಪ - ಕಾಲು ಕೆಜಿ
ಪಾಕ ವಿಧಾನ:
ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ಸ್ವಲ್ಪ ಹುರಿದುಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದಕ್ಕೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿ ಹಾಕಿ ಮಿಶ್ರ ಮಾಡಿ.
ನಂತರ ಈ ಮಿಶ್ರಣಕ್ಕೆ ಅಡಿಗೆ ಸೋಡಾ, ಉಪ್ಪು, ತೆಂಗಿನತುರಿ, ಮೊಸರು ಹಾಕಿ ಗಟ್ಟಿಯಾಗಿ ಕಲಸಿಕೊಂಡು ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ.ಒಲೆಯಲ್ಲಿ ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿ . ತುಪ್ಪ ಕಾದ ನಂತರ ಮಾಡಿಟ್ಟುಕೊಂಡ ಉಂಡೆಗಳನ್ನು ತಟ್ಟಿ ಹಾಕಿರಿ. ಅದು ಚೆನ್ನಾಗಿ ಕಾದ ನಂತರ ಬಾಣಲೆಯಿಂದ ತೆಗೆಯಿರಿ.