ಸೋರೆಕಾಯಿ ಹಲ್ವಾ ತಿಂದಿದ್ದೀರಾ?

ಶನಿವಾರ, 13 ಜೂನ್ 2020 (15:54 IST)
ಸೋರೆಕಾಯಿ ಎಂದರೆ ಕೆಲವರಿಗೆ ತುಂಬಾ ಇಷ್ಟ. ಇಂಥ ಕಾಯಿಯಿಂದ ಹಲ್ವಾ ಮಾಡಿ ತಿಂದರೆ ಅದರ ರುಚಿ ಹೇಗಿರುತ್ತೆ ಗೊತ್ತಾ?

ಏನೇನ್ ಬೇಕು?

ಸೋರೆಕಾಯಿ ತುರಿ 100 ಗ್ರಾಂ
ಸಕ್ಕರೆ 200 ಗ್ರಾಂ
ಖೋವಾ 100 ಗ್ರಾಂ
ಗೋಡಂಬಿ 500 ಗ್ರಾಮ್
ತುಪ್ಪ 25 ಗ್ರಾಂ
ಏಲಕ್ಕಿ ಪುಡಿ ಅರ್ಧ ಟೀ ಚಮಚ
ಕೇಸರಿದಳ 5

ಮಾಡೋದು ಹೇಗೆ?

ಸ್ವಲ್ಪ ತುಪ್ಪದಲ್ಲಿ ಸೋರೆಕಾಯಿ ತುರಿ ಹುರಿದುಕೊಂಡು ಸಣ್ಣ ಉರಿಯಲ್ಲಿ ನೀರು ಸೇರಿಸದೆ ಬೇಯಿಸಬೇಕು. ನೀರಿನಲ್ಲಿ ಖೋವಾ ಸೇರಿಸಿ ಕೆದಕಿ. ಸಕ್ಕರೆ ಹಾಕಿ ಅಂಟು ಪಾಕ ಬಂದಾಗ ತುಪ್ಪ ಸೇರಿಸಿ ಕದಡಿ ಕೆಳಗಿಳಿಸಿ. ಹುರಿದ ಗೋಡಂಬಿ, ಏಲಕ್ಕಿ ಪುಡಿ, ಕೇಸರಿ ಎಲೆಗಳನ್ನು ಸೇರಿಸಿದರೆ ಸೋರೆಕಾಯಿ ಹಲ್ವಾ ಸಿದ್ಧ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ