ಮುಸುಕಿನ ಜೋಳದ ಹಪ್ಪಳ ಮಾಡೋದು ಗೊತ್ತಾ?

ಶನಿವಾರ, 13 ಜೂನ್ 2020 (15:48 IST)
ಮುಸುಕಿನ ಜೋಳ ಗಟ್ಟಿ ಆರೋಗ್ಯಕ್ಕೆ ಪೂರಕ. ಇಂತಹ ಜೋಳದಿಂದ ಹಪ್ಪಳ ಮಾಡಿ ಬೊಂಬಾಟ್ ರುಚಿ ನೋಡಿ.

ಏನೇನು ಬೇಕು?

ಮುಸುಕಿನ ಜೋಳದ ಹಿಟ್ಟು 2 ಕಪ್
ಉಪ್ಪು ಒಂದು ಚಮಚ
ಪುಡಿ ಇಂದು  1 ಚಮಚ
ಮೆಣಸಿನ ಪುಡಿ 1 ಚಮಚ
ಜೀರಿಗೆ 1 ಚಮಚ
ಅಡುಗೆ ಸೋಡಾ ಒಂದು 1 ಚಮಚ

ಮಾಡೋದು ಹೇಗೆ?

ಕುದಿಯುವ ನೀರಿಗೆ ಉಪ್ಪು, ಅಡುಗೆ ಸೋಡಾ, ಇಂಗು, ಜೀರಿಗೆ ಪುಡಿ, ಮೆಣಸಿನ ಪುಡಿ, ಒಂದು ಚಿಕ್ಕ ತುಂಡು ಬೆಲ್ಲ, 2 ಚಮಚ ಎಣ್ಣೆ ಹಾಕಿ. ಇವೆಲ್ಲ ಕುದಿಯುತ್ತಿದ್ದಂತೆ ಜೋಳದ ಹಿಟ್ಟನ್ನು ನಿಧಾನವಾಗಿ ಹಾಕುತ್ತಾ ಗಂಟು ಹಿಡಿಯದಂತೆ ಸೌಟಿನಿಂದ ಕೆದಕುತ್ತಿರಿ.  ಚೆನ್ನಾಗಿ ಬೆಂದ ನಂತರ ಕೆಳಗಿಳಿಸಿ. ಆರಿದ ಹಿಟ್ಟನ್ನು ಒರಳಿಗೆ ಹಾಕಿಕೊಂಡು ಹದವಾಗಿ ಕುಟ್ಟಿರಿ. ಆಮೇಲೆ ಹಿಟ್ಟನ್ನು ಲಟ್ಟಿಸಿ ಬಿಸಿಲಿಗೆ ಒಣಗಿಸಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ